ಧಾರಾವಾಹಿ ಮೂಲಕ ಮತ್ತೆ ನಟನೆಗೆ ಮರಳಿದ ಪೂಜಾ ಗಾಂಧಿ..! ಯಾವುದು ಆ ಸಿರಿಯಲ್..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್‌ ನಾಟೌಟ್‌: ‘ಮುಂಗಾರು ಮಳೆ’ (Mungaru Male) ನಟಿ ಪೂಜಾ ಗಾಂಧಿ (Pooja Gandhi) ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದು, ಮತ್ತೆ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ನಿನಗಾಗಿ’ ಎಂಬ ಸಿರಿಯಲ್ ನಲ್ಲಿ ಪೂಜಾ ಗಾಂಧಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾ ನಟಿಯೊಬ್ಬರ ಕಥೆ ಹೊಂದಿರುವ ‘ನಿನಗಾಗಿ’ ಸೀರಿಯಲ್‌ನಲ್ಲಿ ಸೂಪರ್ ಸ್ಟಾರ್ ರಚನಾ ಎಂಬ ಪಾತ್ರದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ ನಟಿಸುತ್ತಿದ್ದಾರೆ. View this post on Instagram A post shared by DU✨ (@divya_uruduga) ಈ ಸೀರಿಯಲ್‌ಗೆ ಪೂಜಾ ಗಾಂಧಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಪೂಜಾ ಗಾಂಧಿ ಜೊತೆಗಿನ ಫೋಟೋಗಳನ್ನು ದಿವ್ಯಾ ಉರುಡುಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಸಹಕಲಾವಿದರು ಕೂಡ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಮುಂಗಾರು ಮಳೆ, ಮಿಲನಾ, ಕೃಷ್ಣ, ಅನು, ತಾಜ್‌ಮಹಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೂಜಾ ಗಾಂಧಿ ನಟಿಸಿದ್ದಾರೆ.