‘ಪ್ರಜ್ವಲ್ ಪೆನ್​ಡ್ರೈವ್’ ಪ್ರಕರಣ ಸುದ್ದಿಯಾದ ಬೆನ್ನಲ್ಲೇ ‘ಪೆನ್​ಡ್ರೈವ್’ ಸಿನಿಮಾ..! ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಬಿಗ್ ಬಾಸ್ ಖ್ಯಾತಿಯ ತನಿಷಾ..!

ನ್ಯೂಸ್‌ ನಾಟೌಟ್‌: ರಾಜ್ಯದಲ್ಲಿ ಪೆನ್​ಡ್ರೈವ್ ವಿಚಾರ ಚರ್ಚೆಯಲ್ಲಿರುವಾಗಲೇ ‘ಪೆನ್​ಡ್ರೈವ್’ ಶೀರ್ಷಿಕೆಯಲ್ಲಿ ಸಿನಿಮಾ ಬರಲು ಸಜ್ಜಾಗಿದೆ. ಜುಲೈ 04 ರಂದು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಗಿದೆ. ‘ಪೆನ್​ಡ್ರೈವ್’ ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ಸೀಜನ್‌ 10ರಲ್ಲಿ ಸ್ಪರ್ಧಿ ತನಿಷಾ ಕುಪ್ಪಂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಪೆನ್​ಡ್ರೈವ್’ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಸ್ವತಃ ತನಿಷಾ ಕುಪ್ಪಂಡ ಮಾತನಾಡಿದ್ದು, ‘ಪೆನ್​ಡ್ರೈವ್ ಎಂದ ತಕ್ಷಣ ಎಲ್ಲರಿಗೂ ಯಾವುದೋ ಒಂದು ಲಿಂಕ್‌..ಯಾವುದೋ ಒಂದು ವಿಷಯ..ಏನೋ ಒಂದು ಎನ್ನುವಂತಹ ಒಂದಿಷ್ಟು ಪ್ರಶ್ನೆಗಳು ಇರುತ್ತದೆ. ಆದರೆ ನನ್ನ ಪ್ರಕಾರ ‘ಪೆನ್​ಡ್ರೈವ್’ ಎನ್ನುವಂತದ್ದು ಹೊಸ ಸುದ್ದಿ ಅಲ್ಲ. ‘ಪೆನ್​ಡ್ರೈವ್’ನ ನಾವು ನಮ್ಮ ಜೀವನದ ಒಳ್ಳೆಯ ನೆನಪುಗಳನ್ನು ಅಂದರೆ ಮೆಮೋರಿಸ್‌ಗಳನ್ನು ಸೇವ್‌ ಮಾಡಿಕೊಳ್ಳಲು ಬಹಳ ವರ್ಷಗಳಿಂದ ಬಳಸಿಕೊಂಡು ಬರುತ್ತಿರುವ ವಸ್ತು ಎಂದಿದ್ದಾರೆ. Click 👇