ಮಗು ಬಿದ್ದಾಗ ಪೆನ್ನು ತಲೆಗೆ ಚುಚ್ಚಿ ಸಾವು..! ಪುಟ್ಟ ಕಂದನ ಭವಿಷ್ಯ ಬೆಳಗಬೇಕಿದ್ದ ಪೆನ್ನು ಜೀವ ತೆಗೆದದ್ದೇಗೆ..?

ನ್ಯೂಸ್ ನಾಟೌಟ್: ಮಕ್ಕಳು ಹೋಂ ವರ್ಕ್ ಮಾಡಲು ಕೂತಾಗ ಸುಮ್ಮನೆ ಕೂರದೆ ಆಡುವುದು ಸಾಮಾನ್ಯ, ಅದರಂತೆ ಈ ಮಗು ಕೂಡ ಆಟವಾಡುತ್ತಾ ಹೋಂವರ್ಕ್ ಮಾಡುವಾಗ ಮಂಚದಿಂದ ಕೆಳಗೆ ಬಿದ್ದಿದೆ. ಆದರೆ ಬೀಳುವಾಗ ಮಗುವಿನ ಕೈಯಲ್ಲಿದ್ದ ಪೆನ್ನಿನ ತುದಿ ಮಗುವಿನ ತಲೆಯೊಳಗೆ ಚುಚ್ಚಿಕೊಂಡು ಸಾವನ್ನಪ್ಪಿದ ಘಟನೆ ತೆಲಂಗಾಣದ ಭದ್ರಾಚಲಂ ನಗರದಲ್ಲಿ ನಡೆದಿದೆ. ಯುಕೆಜಿ ಓದುತ್ತಿರುವ ಈ ಪುಟ್ಟ ಕಂದಮ್ಮ ಎಂದಿನಂತೆ ಅಂದು ಕೂಡ ಶಾಲೆಗೆ ಖುಷಿ-ಖುಷಿಯಿಂದ ಬಂದಿದೆ. ನಂತರ ಎಂದಿನಂತೆ ಹೋಂವರ್ಕ್ ಮುಗಿಸಲು ಮಂಚದ ಮೇಲೆ ಕೂತಿದೆ. ಆಟವಾಡುತ್ತಾ ಹೋಂವರ್ಕ್ ಮಾಡುವಾಗ ಮಂಚದಿಂದ ಕೆಳಗೆ ಬಿದ್ದಿದ್ದ ವೇಳೆ ಈ ಘಟನೆ ನಡೆದಿದೆ. ಆ ಮಗುವನ್ನು ಮನೆಯವರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸರ್ಜರಿ ಮಾಡಿದರೂ ಮಗು ಬದುಕಿಳಿಯಲಿಲ್ಲ ಎನ್ನಲಾಗಿದೆ. ಮಗುವಿನ ಭವಿಷ್ಯ ಬೆಳಗಬೇಕಾಗಿದ್ದ ಪೆನ್ ಮಗುವಿನ ಜೀವ ತೆಗೆದಿದ್ದು ವಿಚಿತ್ರ. ಪುಟ್ಟ ಮಕ್ಕಳ ಕೈಯಲ್ಲಿ ಏನೇ ನೀಡುವುದಿದ್ದರೂ, ಅಥವಾ ಅವರಿಗೆ ಸಿಗುವಂತಿದ್ದರೂ ಪೋಷಕರು ಜಾಗ್ರತೆ ವಹಿಸುವುದು ಅವಶ್ಯಕ. Click 👇