ನ್ಯೂಸ್ ನಾಟೌಟ್: ಭಾರೀ ಭೂಕುಸಿತದ ಸಂದರ್ಭದಲ್ಲಿ ಎರಡು ಬಸ್ಸುಗಳು ತ್ರಿಶೂಲಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿ, ಏಳು ಮಂದಿ ಭಾರತೀಯರು ಸೇರಿದಂತೆ 65 ಮಂದಿ ನಾಪತ್ತೆದ ಘಟನೆ ನೇಪಾಳದ ಚಿತ್ವಾನ್ ಪ್ರದೇಶದಲ್ಲಿ ನಡೆದಿದೆ.
ಏಂಜೆಲ್ ಬಸ್ ಮತ್ತು ಗಣಪತಿ ಡಿಲಕ್ಸ್ ಬಸ್ಗಳು ಗೌರ್ ಮಾರ್ಗವಾಗಿ ಕಠ್ಮಂಡುವಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬೆಳಿಗ್ಗೆ 3.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ನಾರಾಯಣಘಾಟ್- ಮುಗ್ಲಿಂಗ್ ರಸ್ತೆಯ ಸಿಮಾಲ್ತಾಲ್ ಪ್ರದೇಶದಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಭೂಕುಸಿತದಿಂದಾಗಿ ಪ್ರಯಾಣಿಕರು ತಳ್ಳಲ್ಪಟ್ಟರು ಎನ್ನಲಾಗಿದೆ. ಈ ಪೈಕಿ ಏಳು ಮಂದಿ ಭಾರತೀಯರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಂಜೆಲ್ ಬಸ್ನಲ್ಲಿ 24 ಮಂದಿ ಹಾಗೂ ಗಣಪತಿ ಡಿಲಕ್ಸ್ ನಲ್ಲಿ 41 ಮಂದಿ ಪ್ರಯಾಣಿಕರು ಇದ್ದರು ಎಂದು ಪೊಲೀಸರು ಹೇಳಿದ್ದಾರೆ. ಮೂರು ಮಂದಿ ಪ್ರಯಾಣಿಕರು ವಾಹನದಿಂದ ಹೊರಕ್ಕೆ ಹಾರಿ ತಪ್ಪಿಸಿಕೊಂಡಿದ್ದಾರೆ. ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ.
Click 👇