- +91 73497 60202
- [email protected]
- November 22, 2024 6:52 PM
ನ್ಯೂಸ್ ನಾಟೌಟ್: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಿ ತನ್ನ ಮೊದಲ ಭಾಷಣದಲ್ಲಿ ಶಿವನ ಫೋಟೋ ಹಿಡಿದುಕೊಂಡು ಬಿಜೆಪಿ ಮತ್ತು ಆರ್.ಎಸ್.ಎಸ್ ನಲ್ಲಿ ಇರುವವರೆಲ್ಲ ಹಿಂದೂ ವಿರೋಧಿಗಳು, ಯಾಕೆಂದರೆ ಹಿಂದೂಗಳು ಎಂದೂ ಹಿಂಸೆಯನ್ನು ಪ್ರಜೋದಿಸುವುದಿಲ್ಲ ಎಂದಿದ್ದರು. ಶಿವನ ಕೈಯಲ್ಲಿರುವ ಅಭಯ ಹಸ್ತವೇ ದೈರ್ಯ ಮತ್ತು ಅಭಯದ ಸೂಚಕ ಅದು ನಮ್ಮ ಕಾಂಗ್ರೆಸ್ ನ ಚಿಹ್ನೆ ಹಾಗಾಗಿ ನಾವು ನಿಜವಾದ ಹಿಂದೂಗಳು ಎಂದು ಭಾಷಣ ಮಾಡಿದ್ದ ಬಗ್ಗೆ ತೀವ್ರ ಚರ್ಚೆಗಳು ನಡೆದಿದ್ದವು. ನಂತರದ ಕಲಾಪದಲ್ಲಿ ಮೋದಿ ಈ ಬಗ್ಗೆ ದೀರ್ಘ ಭಾಷಣ ಮಾಡಿದ್ದರು, ಇದನ್ನು ವಿರೋಧಿಸಿ ಸದನದ ಬಾವಿಗಿಳಿದು ಕಾಂಗ್ರೆಸ್ ನಾಯಕರು ಗದ್ದಲ ಎಬ್ಬಿಸಿದರು. ಈ ವೇಳೆ ಮೋದಿ ಅವರಿಗೆ ನೀರು ಕೊಟ್ಟು ಸಾವರಿಸಿಕೊಳ್ಳುವಂತೆ ಸೂಚಿಸಿದ ವಿಡಿಯೋ ಈಗ ಭಾರೀ ವೈರಲ್ ಆಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯ ಮೇಲೆ ಮೋದಿ ಭಾಷಣ ಮಾಡಿದರು. ಮೋದಿ ಭಾಷಣ ಮಾಡಲು ಮುಂದಾಗುತ್ತಿದ್ದಂತೆ ಪ್ರತಿ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು. ʼಮಣಿಪುರ್ ಗೋʼ, ʼಮಣಿಪುರ್ ವಾಂಟ್ ಜಸ್ಟಿಸ್ʼ, ʼಅಗ್ನಿವೀರ್ʼ ಇತ್ಯಾದಿ ಘೋಷಣೆ ಕೂಗಿ ಅಡ್ಡಿ ಪಡಿಸುತ್ತಿದ್ದರು. ಬಾವಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಪಕ್ಷದ ಸದಸ್ಯರಿಗೆ ಅಲ್ಲಿಂದ ತೆರಳುವಂತೆ ಸ್ಪೀಕರ್ ಓಂ ಬಿರ್ಲಾ ಸೂಚಿಸಿದರೂ ಅವರು ಸ್ಥಳದಿಂದ ತೆರಳದೇ ಪ್ರತಿಭಟನೆ ಮುಂದುವರಿಸುತ್ತಲೇ ಇದ್ದರು. ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಿಲ್ಲಿಸುವುದಿಲ್ಲ ಎನ್ನುವುದು ಮೋದಿಗೆ ತಿಳಿಯುತ್ತಿದ್ದಂತೆ ಸುದೀರ್ಘ ಭಾಷಣ ಮಾಡತೊಡಗಿದರು. ಸದನ ಬಾವಿಗೆ ಇಳಿದು ಪ್ರತಿಭಟಿಸುತ್ತಿದ್ದ ಕೆಲ ಸದಸ್ಯರು ಕಿರುಚಿ ಸುಸ್ತಾಗಿದ್ದರು. ಇದನ್ನು ಗಮನಿಸಿದ ಮೋದಿ ತನಗೆ ನೀಡಿದ್ದ ನೀರನ್ನು ಪ್ರತಿಪಕ್ಷದ ಸದಸ್ಯರಿಗೆ ನೀಡಿದರು. ಒಬ್ಬರು ಸದಸ್ಯರು ನೀರನ್ನು ಕುಡಿದರು. ಪ್ರಧಾನಿ ಮೋದಿ ಮಂಗಳವಾರ 2 ಗಂಟೆ 15 ನಿಮಿಷ ಮಾತನಾಡಿದರು. ಆರಂಭದಿಂದ ಕೊನೆಯವರೆಗೂ ಪ್ರತಿ ಪಕ್ಷದ ಸದಸ್ಯರು ಘೋಷಣೆ ಕೂಗಿ ಅಡ್ಡಿಪಡಿಸಿದರು. ಮೋದಿ ಭಾಷಣಕ್ಕೆ ವಿಪಕ್ಷ ಸದಸ್ಯರು ಅಡ್ಡಿ ಪಡಿಸಿದ್ದಕ್ಕೆ ಸದನ ಕೊನೆಗೆ ಖಂಡನಾ ಗೊತ್ತುವಳಿಯನ್ನು ಅಂಗೀಕರಿಸಲಾಗಿದೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ