ಸಿಂಟೆಕ್ಸ್ ಟ್ಯಾಂಕ್‌ ನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು..! ತಾಯಿ, ಮಗಳ ಸಮೇತ ಗುಡಿಸಲು ಭಸ್ಮ..!

ನ್ಯೂಸ್ ನಾಟೌಟ್: ಸಿಂಟೆಕ್ಸ್ ಟ್ಯಾಂಕ್‌ ನಲ್ಲಿ ಪೆಟ್ರೋಲ್ (Petrol) ತುಂಬಿಸಿ ಶೆಡ್ ಮೇಲೆ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ತಾಯಿ-ಮಗಳು ಸಜೀವ ದಹನವಾದ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಜೈಬಾನ್ (55), ಶಬಾನ್ (25) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ತಾಯಿ -ಮಗಳ ಜೊತೆ ಶೆಡ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ದಸ್ತಗೀರಸಾಬ್, ಸುಬಾನ್ ಹಾಗೂ ಸಿದ್ದಿಕಿ ಎಂಬವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ಶ್ವಾನ ದಳ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಬಾಗಲಕೋಟೆ ಎಸ್‌ಪಿ ಭೇಟಿ ನೀಡಿದ್ದಾರೆ.