ನ್ಯೂಸ್ ನಾಟೌಟ್: ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೇದಾರನಾಥ ಸಮೀಪ ಭೂಕುಸಿತದಿಂದಾಗಿ ಮೂವರು ಯಾತ್ರಿಕರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.
ಮೃತಪಟ್ಟವರಲ್ಲಿ ಇಬ್ಬರು ಮಹಾರಾಷ್ಟ್ರ ಮೂಲದ ಅರುಣ್ ಪರಾಠೆ ಮತ್ತು ಸುನಿಲ್ ಮಹಾದೇವ್ ಕಾಲೆ ಎಂದು ಗುರುತಿಸಲಾಗಿದೆ. ಮತ್ತೋರ್ವನನ್ನು ರುದ್ರಪ್ರಯಾಗ್ ಮೂಲದ ಅನುರಾಗ್ ಬಿಶ್ತ್ ಎಂದು ಗುರುತಿಸಲಾಗಿದೆ.
ಯಾತ್ರಿಕರು ಭಾನುವಾರ ಬೆಳಗ್ಗೆ ಗೌರಿಕುಂಡಾದಿಂದ ಪ್ರಯಾಣ ಆರಂಭಿಸಿದ್ದರು. ಚಿರ್ಬಾಸಾ ಪ್ರದೇಶದ ಸಮೀಪ ಭಾರೀ ಭೂ ಕುಸಿತ ಸಂಭವಿಸಿದ್ದು, ಮೂವರು ಯಾತ್ರಿಕರು ಸ್ಥಳದಲ್ಲೇ ಮೃತಪಟ್ಟಿದಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು, ವಿಪತ್ತು ನಿರ್ವಹಣಾ ಪಡೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರ್ಗ ಮಧ್ಯೆ ಸಿಲುಕಿದ ಯಾತ್ರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.