ನ್ಯೂಸ್ ನಾಟೌಟ್ : ನೀವೇನಾದರೂ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದೀರಾ..? ಉಸಿರಾಟದಲ್ಲಿ ತೊಂದರೆ, ಎದೆ ಬಿಗಿಯಾದಂತೆ ಅನ್ನಿಸುವುದು, ಉಸಿರಾಡುವಾಗ ಸೀಟಿ ಹೊಡೆದಂತಾಗುವುದು ಇಂತಹ ಗುಣಲಕ್ಷಣಗಳನ್ನು ಹೊಂದಿದ್ದೀರಾ? ಹಾಗಾದರೆ ಬನ್ನಿ ಜುಲೈ 25ರಂದು ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶ್ವಾಸಕೋಶ ವಿಭಾಗದ ವತಿಯಿಂದ ಉಚಿತ ಅಸ್ತಮಾ/ಅಲರ್ಜಿ ಆರೋಗ್ಯ ತಪಾಸಣೆ ಹಾಗೂ ಸಮಾಲೋಚನೆ ನಡೆಯಲಿದೆ.
ಶಿಬಿರದಲ್ಲಿ ಶ್ವಾಸಕೋಸದ ಸಾಮರ್ಥ್ಯ ಅಳೆಯುವ ಕಂಪ್ಯೂಟರೀಕೃತ ಪರೀಕ್ಷೆ(PFT) ಹಾಗೂ ಅಸ್ತಮಾ ಧೃಢೀಕರಿಸಲು ಒಂದು ಉಪಯುಕ್ತ ಪರೀಕ್ಷೆ (IgE) ಉಚಿತವಾಗಿ ನಡೆಸಲಾಗುವುದು. ಅಲ್ಲದೇ ಅಸ್ತಮಾ, ಉಚಿತ ಆರೋಗ್ಯ ತಪಾಸಣೆ ಹಾಗೂ ಸಮಾಲೋಚನೆಯಲ್ಲಿ ಪಾಲ್ಗೊಂಡು ಪರಿಹಾರ ಪಡೆದುಕೊಳ್ಳಬಹುದು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶ್ವಾಸಕೋಶ ವಿಭಾಗದ ನುರಿತ ವೈದ್ಯರಾದ ಡಾ. ಪ್ರೀತಿರಾಜ್ ಬಲ್ಲಾಳ್ (MBBS,DNB,IDCCM) ಹಾಗೂ ಡಾ. ಅನಿರುದ್ಧ ಕೆ. (MBBS,MD,DNB) ಆರೋಗ್ಯ ತಪಾಸಣೆ ನಡೆಸಲಿದ್ದಾರೆ.
ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು. ಉಚಿತ ಶಿಬಿರದಲ್ಲಿ ಪಾಲ್ಗೊಳ್ಳುವವರು ನೋಂದಾವಣಿಗಾಗಿ 08257-235532, 7353752223, 8310234680 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.