ಟಿಕೆಟ್ ದರ ಏರಿಕೆ ಮಾಡುವಂತೆ ಮತ್ತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೆ.ಎಸ್.ಆರ್.​ಟಿ.ಸಿ, ಬಿ.ಎಂ.ಟಿ.ಸಿ..! 20% ದರ ಹೆಚ್ಚಳ ಮಾಡುವಂತೆ ಒತ್ತಾಯ..!

ನ್ಯೂಸ್ ನಾಟೌಟ್: ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳು ಬಸ್ ಟಿಕೆಟ್ ದರ ಏರಿಕೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಬಿಎಂಟಿಸಿ ಬರೋಬ್ಬರಿ ಶೇ 37 ರಷ್ಟು ಟಿಕೆಟ್ ದರ ಹೆಚ್ಚಳ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದರೆ, ಕೆಎಸ್ಆರ್​ಟಿಸಿ 15-20% ರಷ್ಟು, ಎನ್​​ಡಬ್ಲ್ಯೂಕೆಆರ್​​ಟಿಸಿ ಶೇ 30 ಹಾಗೂ ಕೆಕೆಆರ್​​ಟಿಸಿ ಶೇ 30 ರಷ್ಟು ಟಿಕೆಟ್ ದರ ಏರಿಕೆ ಮಾಡುವಂತೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿವೆ. ನಾಲ್ಕು ನಿಗಮಗಳಿಂದ ಒಟ್ಟಾಗಿ ಬರೋಬ್ಬರಿ ಶೇ 127 ರಷ್ಟು ದರ ಏರಿಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡಿ ಬರೋಬ್ಬರಿ 10 ವರ್ಷಗಳಾಗಿದ್ದರೆ ಇತ್ತ ಕೆ.ಎಸ್.ಆರ್.​ಟಿ.ಸಿ, ಕೆ.ಕೆ.ಆರ್.​ಟಿ.ಸಿ ಹಾಗೂ ಎನ್.ಡಬ್ಲ್ಯೂ.ಕೆ.ಆರ್.​ಟಿ.ಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿ 4 ವರ್ಷಗಳಾಗಿವೆ. ದರ ಹೆಚ್ಚಳವಾಗಿದೆ, ಬಿಡಿ ಭಾಗಗಳ ದರ ಹೆಚ್ಚಳವಾಗಿದೆ, ನೌಕರರಿಗೆ ಸಂಬಳ ಹೆಚ್ಚಳ ಮಾಡಲಾಗಿದೆ. ನಾಲ್ಕು ನಿಗಮಗಳು ನಷ್ಟದಲ್ಲಿದೆ ದರ ಏರಿಕೆ ಅನಿವಾರ್ಯ ಎಂದು ನಿಗಮಗಳು ಮನವಿ ಮಾಡಿವೆ ಎಂದು ಸಾರಿಗೆ ಮುಖಂಡ ಜಗದೀಶ್ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಡಿಸೇಲ್ ಮೇಲೆ ಲೀಟರ್ ಗೆ ಸುಮಾರು ಮೂರೂವರೆ ರೂಪಾಯಿಯಷ್ಟು ದರ ಏರಿಕೆ ಮಾಡಿದ್ದು, ಇದರಿಂದ ನಾಲ್ಕು ನಿಗಮದ ಬಸ್ಸುಗಳಿಗೆ ಡಿಸೇಲ್ ಹಾಕಿಸಲು ತುಂಬಾ ಕಷ್ಟ ಆಗುತ್ತಿದೆ. ಹೆಚ್ಚುವರಿಯಾಗಿ ತಿಂಗಳಿಗೆ 15 ಕೋಟಿ ರೂ. ಹಣ ಬೇಕಾಗುತ್ತದೆ ಎನ್ನಲಾಗಿದೆ. Click