- +91 73497 60202
- [email protected]
- November 10, 2024 1:08 PM
ನ್ಯೂಸ್ ನಾಟೌಟ್: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೆಎಂಎಫ್)ದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಜು.12 ರಂದು(ಇಂದು) ಮತದಾನ ನಡೆಯಲಿದ್ದು, ಇದು ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಗೆ ಸೇರಿವೆ. ಬೆಂಬಲಿತರಿಗೆ ಅಧಿಕಾರದ ಪಟ್ಟ ಕಟ್ಟಲು ಬಿಜೆಪಿ- ಕಾಂಗ್ರೆಸ್ ರಾಜಕೀಯ ಕಸರತ್ತು ನಡೆಸುತ್ತಿವೆ. ಕೆ.ಎಂ.ಎಫ್ ಆಡಳಿತ ಮಂಡಳಿಯ 9 ನಿರ್ದೇಶಕ ಸ್ಥಾನಗಳಿಗೆ ಜೂ.30 ರಂದು ಚುನಾವಣೆ ನಡೆದಿತ್ತು. ಇದರಲ್ಲಿ 7 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆದ್ದುಕೊಂಡಿದ್ದರು. ಇಬ್ಬರು ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದರು. ಆದರೆ, ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಮತದಾನದ ಹಕ್ಕು ಪಡೆದಿರುವ ಸರ್ಕಾರದ ನಾಮನಿರ್ದೇಶಿತ ಸದಸ್ಯರು ಹಾಗೂ ನಾಲ್ವರು ಪದನಿಮಿತ್ತ ನಿರ್ದೇಶಕರ (ಸರಕಾರಿ ಅಧಿಕಾರಿಗಳ) ಬೆಂಬಲ ಪಡೆದು ಕಾಂಗ್ರೆಸ್ ಇಲ್ಲಿ ಗದ್ದುಗೆ ಏರಲು ಹೊರಟಿವೆ. ಕೆಎಂಎಫ್ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗೆ ಚುನಾಯಿತ, ನಾಮನಿರ್ದೇಶಿತ ಹಾಗೂ ಪದನಿಮಿತ್ತ ನಿರ್ದೇಶಕರು ಸೇರಿ ಒಟ್ಟು 14 ಜನ ಮತದಾನದ ಹಕ್ಕು ಪಡೆದಿದ್ದಾರೆ. ಈಗಾಗಲೇ 7 ಚುನಾಯಿತ ನಿರ್ದೇಶಕರು ಹಾಗೂ ಹೊಸದಿಲ್ಲಿಯ ನ್ಯಾಷನಲ್ ಡೇರಿ ಡೆವಲಪ್‌ಮೆಂಟ್ ಬೋರ್ಡ್ (ಎನ್‌ಡಿಡಿಬಿ) ಪ್ರತಿನಿಧಿ ಸೇರಿ 8 ಮತಗಳ ಬಲ ಬಿಜೆಪಿಗಿದೆ ಎನ್ನಲಾಗಿದೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ