ಪ್ರವಾಹಕ್ಕೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿದ್ದ 132ಕ್ಕೂ ಹೆಚ್ಚು ಪ್ರಾಣಿಗಳು ಸಾವು..! 96 ಪ್ರಾಣಿಗಳನ್ನು ರಕ್ಷಿಸಿದ ಅಧಿಕಾರಿಗಳು..!

ನ್ಯೂಸ್ ನಾಟೌಟ್: ಅಸ್ಸಾಂನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಭೀಕರ ಪ್ರವಾಹದಲ್ಲಿ ದೇಶದ ಪ್ರಮುಖ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಪ್ರವಾಹದಲ್ಲಿ ಮುಳುಗಡೆಯಾಗಿದೆ. 132ಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿವೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿನ ಪ್ರವಾಹದಲ್ಲಿ ಕನಿಷ್ಠ 132 ಕಾಡು ಪ್ರಾಣಿಗಳು ಸಾವನ್ನಪ್ಪಿದ್ದು, 96 ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ಸೋಮವಾರ(ಜುಲೈ 8) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸತ್ತ ಪ್ರಾಣಿಗಳಲ್ಲಿ ಆರು ಘೇಂಡಾಮೃಗಗಳು, 117 ಜಿಂಕೆಗಳು ಸೇರಿವೆ ಎನ್ನಲಾಗಿದೆ. ಚಿಕಿತ್ಸೆಯ ಸಮಯದಲ್ಲಿ ಒಟ್ಟು 25 ಪ್ರಾಣಿಗಳು ಸಾವನ್ನಪ್ಪಿವೆ ಮತ್ತು ಇವುಗಳಲ್ಲಿ 17 ಹಂದಿ ಮತ್ತು ಉಳಿದಂತೆ ಜಿಂಕೆಗಳು, ಜೌಗು ಜಿಂಕೆ, ಮಕಾಕ್ ಮತ್ತು ಓಟರ್ ನಾಯಿ ಸೇರಿವೆ ಎನ್ನಲಾಗಿದೆ. ಅರಣ್ಯಾಧಿಕಾರಿಗಳು 85 ಹಂದಿ, ಎರಡು ಖಡ್ಗಮೃಗ, ಕಡವೆ ಮತ್ತು ಗೂಬೆ ಮತ್ತು ಜೌಗು ಜಿಂಕೆ, ಮೊಲ, ಮಕಾಕ್, ಓಟರ್, ಆನೆ ಮತ್ತು ಕಾಡಿನ ಬೆಕ್ಕುಗಳನ್ನು ರಕ್ಷಿಸಿದ್ದಾರೆ. 2017 ರಲ್ಲಿ ಸಂಭವಿಸಿದ ಪ್ರವಾಹದಲ್ಲಿ 350 ಕ್ಕೂ ಹೆಚ್ಚು ವನ್ಯಜೀವಿಗಳು ಸಾವನ್ನಪ್ಪಿದ್ದವು. Click 👇