ಈ ಜಿಲ್ಲೆಯಲ್ಲಿ10 ನೇ ಪಾಸಾದವರೂ ವೈದ್ಯರು..! ಆಕೆಯಿಂದ ಬಯಲಾಯ್ತು 384 ನಕಲಿ ವೈದ್ಯರ ದಂಧೆ..!

ನ್ಯೂಸ್‌ ನಾಟೌಟ್‌: ನಕಲಿ ವೈದ್ಯರ ಹಾವಳಿ ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ನಕಲಿ ವೈದ್ಯರ ಆಚಾತುರ್ಯಕ್ಕೆ ಒಂದು ಜೀವ ಬಲಿ ಆಗಿದೆ. ಪೊಲೀಸರು ಮಾಹಿತಿಯ ಮೇರೆಗೆ ಪರಿಶೀಲನೆ ನಡೆಸಿದಾಗ 384 ಜನರು ನಕಲಿ ವೈದ್ಯರು ಇರುವುದು ಪತ್ತೆಯಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಬಿಎ, ಬಿಕಾಂ ಓದಿದವರು ವೈದ್ಯರಂತೆ ಔಷಧಿ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಒಟ್ಟಾರೆ 384 ಜನ ನಕಲಿ ವೈದ್ಯರ ಪಟ್ಟಿ ಕೈ ಸೇರಿದೆ. ಜೂನ್ 18ರಂದು ಜಮಖಂಡಿಯಲ್ಲಿ ಸುರೇಖಾ ಚರಕಿ ಎಂಬ ನಕಲಿ ವೈದ್ಯೆ ಸಿಕ್ಕಿಬಿದ್ದಿದ್ದಳು, ಈಕೆಯ ಜಾಡು ಹಿಡಿದ ಪೊಲೀಸರಿಗೆ ಜುಲೈ 6ರ ಒಳಗೆ 384 ನಕಲಿ ವೈದ್ಯರ ಮಾಹಿತಿ ದೊರಕಿದೆ. ಈಕೆಯ ಆಸ್ಪತ್ರೆಯಲ್ಲಿ ಗರ್ಭಪಾತ ದಂಧೆಗೆ ಬಳಸುವ ವಸ್ತುಗಳು ಸಿಕ್ಕಿವೆ. ಈಕೆ ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ. ಆದರೆ ಮಾಡುತ್ತಿದ್ದನ್ನು ವೈದ್ಯ ವೃತ್ತಿ. ಗರ್ಭಪಾತ ಮಹಿಳೆ ಸಾವಿನ ನಂತರ ನಕಲಿ ವೈದ್ಯರ ಬಣ್ಣ ಬಯಲಾಗಿದೆ, ಪೊಲೀಸರು ಹೆಚ್ಚಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.