53 ವರ್ಷಗಳ ಬಳಿಕ ಇಂಡೋ-ಪಾಕ್ ಯುದ್ಧದ ಆಯುಧಗಳು ಪತ್ತೆ..! ಮೀನುಗಾರಿಕೆ ಹೊಂಡದೊಳಗಿತ್ತು 27 ಮಾರ್ಟರ್ ಶೆಲ್ ಗಳು..!

ನ್ಯೂಸ್ ನಾಟೌಟ್: ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಬಳಕೆ ಮಾಡಲಾದ ದೊಡ್ಡ ಪ್ರಮಾಣದ ಮಾರ್ಟರ್ ಶೆಲ್ ಗಳನ್ನು ಕೆರೆಯೊಳಗೆ ಪತ್ತೆ ಮಾಡಲಾಗಿದೆ. ಬಾಂಗ್ಲಾದೇಶದ ವಿಮೋಚನೆಗಾಗಿ ಈ ಯುದ್ಧ ನಡೆದಿತ್ತು. ತ್ರಿಪುರಾ ಜಿಲ್ಲೆಯ ರಂಗೂತಿಯ ಪ್ರದೇಶದಲ್ಲಿ ಮೀನುಗಾರಿಕೆ ಹೊಂಡವೊಂದರಲ್ಲಿ ಇದು ಪತ್ತೆಯಾಗಿದೆ. ಆರಂಭದಲ್ಲಿ ಈ ಶೆಲ್ ಗಳು ಕೆನಾನ್ ನಲ್ಲಿದ್ದವೇ ಅಥವಾ ಮೋರ್ಟರ್ ಗಳಲ್ಲಿದ್ದವೇ ಎನ್ನುವುದು ಸ್ಪಷ್ಟವಾಗಿರಲಿಲ್ಲ. ಬಳಿಕ ಇದು ಮಾರ್ಟರ್ ಶೆಲ್ ಎಂದು ದೃಢಪಡಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಇಎಸ್ಆರ್ ಸಿಬ್ಬಂದಿಯ ನೆರವಿನೊಂದಿಗೆ ಬಮೂತಿಯಾ ಹೊರಠಾಣೆಯ ಬಳಿ ನಡೆಯುತ್ತಿರುವ ಉತ್ಖನನದ ಬಳಿಗೆ ಆಗಮಿಸಿದ್ದಾರೆ, ಒಟ್ಟು 27 ಮಾರ್ಟರ್ ಶೆಲ್ ಗಳು ಪತ್ತೆಯಾಗಿವೆ.