ನ್ಯೂಸ್ ನಾಟೌಟ್: ಮದ್ರಾಸ್ ಹೈಕೋರ್ಟ್ನಲ್ಲಿ ವಕೀಲರೊಬ್ಬರು ವಿಚಿತ್ರ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ. ವೇಶ್ಯಾವಾಟಿಕೆ ನಡೆಯುವ ಕೇಂದ್ರಗಳಿಗೆ ರಕ್ಷಣೆ ಕೊಡಿ ಎಂದು ವಕೀಲರೊಬ್ಬರು ಹೈಕೋರ್ಟ್ ಗೆ ಅರ್ಜಿ ಹಾಕಿದ್ದಾರೆ.
ಇನ್ನು ಈ ಘಟನೆ ತಮಿಳುನಾಡಿನ, ಕನ್ಯಾಕುಮಾರಿಯಲ್ಲಿ ನಡೆದಿದೆ. ಮಧುರೈ ಪೀಠದ ನ್ಯಾಯಮೂರ್ತಿ ಅರ್ಜಿ ಸಲ್ಲಿಸಿದ ವಕೀಲನ ನೋಂದಣಿ ಪತ್ರದ ನೈಜತೆ ಮತ್ತು ಆತನ ಶಿಕ್ಷಣ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ತಮಿಳುನಾಡು ಮತ್ತು ಪುದುಚೆರಿ ವಕೀಲರ ಪರಿಷತ್ತಿಗೆ ಆದೇಶವನ್ನೂ ನೀಡಲಾಗಿದೆ. ವಾಸ್ತವವಾಗಿ, ಕನ್ಯಾಕುಮಾರಿ ನಾಗರಕೋಯಿಲ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಕೀಲರೊಬ್ಬರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಇದೀಗ ಅರ್ಜಿದಾರರು ಈ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ವೇಶ್ಯಾವಾಟಿಕೆ ನಡೆಸುತ್ತಿರುವುದಕ್ಕೆ ರಕ್ಷಣೆ ಬೇಕು ಎಂದು ಹೈಕೋರ್ಟ್ ಅರ್ಜಿಯಲ್ಲಿ ತಿಳಿಸಿದ್ದಾರೆ. ವಕೀಲರ ಈ ಅರ್ಜಿ ನೋಡಿ ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನು ಅರ್ಜಿದಾರನಿಗೆ 10,000 ರೂಪಾಯಿ ದಂಡ ವಿಧಿಸಿ, ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
Click