ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಗೂನಡ್ಕದ ದೊಡ್ಡಡ್ಕ ಎಂಬಲ್ಲಿ ಮನೆ ಪಕ್ಕದಲ್ಲಿ ಬಾಯ್ತೆರೆದುಕೊಂಡಿದ್ದ ಗುಂಡಿಯನ್ನು ಸ್ಥಳೀಯಾಡಳಿತ ಮುಚ್ಚಿಸಿದೆ.
ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜಾರಾಂಪುರದಲ್ಲಿ ಇಂದು (ಜು.೧೬) ಬೆಳಗ್ಗೆ ವೇಳೆಗೆ ಬಾಳಪ್ಪ ಅನ್ನುವವರ ಮನೆಯ ಪಕ್ಕದಲ್ಲಿ ದೊಡ್ಡ ಗುಂಡಿಯೊಂದು ಬಾಯ್ತೆರೆದುಕೊಂಡಿತ್ತು.
ಇದರಿಂದ ಮನೆಯವರು ಕೂಡ ಆತಂಕಗೊಂಡಿದ್ದರು. ಕೆಳಗಡೆ ಸುರಂಗವೊಂದು ಇದೆ ಅನ್ನುವಂತಹ ಮಾತುಗಳು ಕೂಡ ಕೇಳಿ ಬಂದಿದ್ದವು. ಈ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಂದಾಯ ಇಲಾಖೆ, ಇಂಜಿನೀಯರ್ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್, ಹಾಲಿ ಉಪಾಧ್ಯಕ್ಷ ಎಸ್ ಕೆ ಹನೀಫ್, ಪಿಡಿಒ ಸರಿತಾ, ಹಾಲಿ ಅಧ್ಯಕ್ಷೆ ಸುಮತಿ ಶಕ್ತಿವೇಲು ಮತ್ತಿತರರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.