- +91 73497 60202
- [email protected]
- November 22, 2024 1:01 AM
ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲೂ ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಮೂಲಕ ಪಾವತಿ..! ಯಾವಾಗಿನಿಂದ ಜಾರಿಗೆ..?
ನ್ಯೂಸ್ ನಾಟೌಟ್: ಟಿಕೆಟ್ ಕೊಡುವ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ಕಂಡಕ್ಟರ್ಗಳ ಮಧ್ಯೆ ಚಿಲ್ಲರೆಗಾಗಿ ಯಾವಾಗಲೂ ಜಗಳ ನಡೆಯುತ್ತಲೇ ಇರುತ್ತದೆ. ಜೊತೆಗೆ ಟಿಕೆಟ್ ರಹಿತ ಪ್ರಯಾಣ ಮುಂತಾದ ಸಮಸ್ಯೆಗಳನ್ನು ದೂರ ಮಾಡಲು ಇನ್ನು ಮುಂದೆ KSRTC ಯಲ್ಲೂ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ಹಣ ಪಾವತಿಸಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಖಾಸಗಿ ಕಂಪೆನಿಯಿಂದ ಒಂದು ಮಷಿನ್ಗೆ ಪ್ರತಿ ತಿಂಗಳು 645 ರೂಪಾಯಿ ಬಾಡಿಗೆ ಆಧಾರದಲ್ಲಿ 10245 ಸಾವಿರ ಇಟಿಎಂ(Electronic Ticketing Machine) ಟಿಕೆಟ್ ಮಷಿನ್ಗಳ ಖರೀದಿಗೆ ಕೆಎಸ್ಆರ್ಟಿಸಿ ಮುಂದಾಗಿದೆ. ಇದರಿಂದ ಇನ್ಮುಂದೆ ಕೆಎಸ್ಆರ್ಟಿಸಿ ಬಸ್ನಲ್ಲಿ ಗೂಗಲ್ ಪೇ, ಫೋನ್ ಪೇ. ಪೇಟಿಎಂ ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಪಡೆದು ಪ್ರಯಾಣಿಸಬಹುದಾಗಿದೆ. ಈ ನೂತನ ಮಷಿನ್ಗಳಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ಗಳನ್ನು ಬಳಸಿಯೂ ಹಣ ಪಾವತಿ ಮಾಡಬಹುದು ಎನ್ನಲಾಗಿದೆ. ಸದ್ಯ ಈಗ ಇರುವ ಮಷಿನ್ಗಳು ರೋಡ್ ಮಧ್ಯೆ ಕೈಕೊಟ್ಟು ಪ್ರಯಾಣಿಕರು ಮತ್ತು ಕಂಡಕ್ಟರ್ ಜೊತೆಗೆ ಜಗಳವಾಗುತ್ತಿದೆ. ಹೊಸ ಮಷಿನ್ನಿಂದ ಇದು ತಪ್ಪಲಿದೆ ಎಂದು ನಿಗಮ ತಿಳಿಸಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ