ನ್ಯೂಸ್ ನಾಟೌಟ್: ಗಾಂಜಾ ಸೇವನೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕಲ್ಲುಗುಂಡಿಯ ಯುವಕರಿಗೆ ಶಿಕ್ಷೆ ಪ್ರಕಟಿಸಲಾಗಿದೆ. ಶಿಕ್ಷೆಗೆ ಒಳಗಾದವರ ಹೆಸರು ಸಫಾನ್ ಹಾಗೂ ತನೀಶ್ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ವಿರುದ್ಧ ಗಾಂಜಾ ಸೇವನೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆದು ಇದೀಗ ಶಿಕ್ಷೆ ಹೊರ ಬಿದ್ದಿದ. ಈತನಿಗೆ ಹತ್ತು ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಗಾಂಜಾ ಅನ್ನುವ ಅಮಲು ಸುಳ್ಯದ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಸರಬರಾಜು ಆಗುತ್ತಿದೆ. ಪೆಡ್ಲರ್ ಗಳ ಹಾವಳಿ ಜೋರಾಗುತ್ತಿದ್ದು ಯುವಜನತೆಯನ್ನು ಅಮಲಿನಲ್ಲಿ ದಾರಿ ತಪ್ಪಿಸುವುದೇ ಅವರ ಕೆಲಸವಾಗಿದೆ. ಹೀಗಾಗಿ ಬಿಗಿ ಕ್ರಮದ ಮೂಲಕ ಗಾಂಜಾ ಅಮಲಿಗೆ ಕಡಿವಾಣ ಹಾಕಬೇಕಿದೆ.