ಉಡುಪಿ: ಆನೆ ದಾಳಿಯ ಆತಂಕ..! ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಿಂದಲೇ ವಾಹನ ವ್ಯವಸ್ಥೆ..!

ನ್ಯೂಸ್ ನಾಟೌಟ್: ಸೋಮೇಶ್ವರ ಅಭಯಾರಣ್ಯದ ಪರಿಸರದ ನೆಲ್ಲಿಕಟ್ಟೆ ಬಡಾ ತಿಂಗಳೆ ಎಂಬಲ್ಲಿನ ಪರಿಸರದಲ್ಲಿ ಮತ್ತೆ ಆನೆಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದು, ಉಡುಪಿಯ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದಲ್ಲಿ ಮಕ್ಕಳಿಗೆ ಅರಣ್ಯ ಇಲಾಖೆಯೇ ಪ್ರಯಾಣಕ್ಕೆ ವಾಹನ ವ್ಯವಸ್ಥೆ ಕಲ್ಪಿಸುತ್ತಿದೆ. ಈ ಪರಿಸರದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಸುಮಾರು 5 ಕಿ. ಮೀ. ನಡೆದುಕೊಂಡೇ ಬಂದು ಬಸ್ ಹಿಡಿಯಬೇಕು. ಶಾಲಾ ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರು ಕಾಡಾನೆಯ ಹಾವಳಿ ಯಿಂದ ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ನಡೆದು ಕೊಂಡು ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗು ವಂತೆ ಅರಣ್ಯ ಇಲಾಖೆಯ ವಲಯ ವನ್ಯಜೀವಿ ವಿಭಾಗದಿಂದ ಗ್ರಾಮೀಣ ಪ್ರದೇಶದ ಮಕ್ಕಳನ್ನು ಶಾಲೆಗೆ ಕರೆತಂದು ಮತ್ತೆ ಪುನಃ ಮನೆಗೆ ವಾಪಸ್‌ ಬಿಡಲು ಜು. 12ರಿಂದ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಇಲಾಖೆಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.