ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಜಾಲತಾಣದಲ್ಲಿ ಯದ್ವಾತದ್ವಾ ವಿಡಿಯೋ ಹಂಚಿಕೊಳ್ಳುವವರನ್ನು ನೋಡಿದ್ದೇವೆ. ಕೆಲವರು ಸಭ್ಯರಂತೆ, ಇನ್ನೂ ಕೆಲವರು ಅಸಭ್ಯರಂತೆ ವರ್ತಿಸಿ ಜನರಿಂದ ವಿಪರೀತ ಟೀಕೆಗೆ ಒಳಗಾಗುತ್ತಿರುತ್ತಾರೆ. ಆದರೆ ಇಲ್ಲೊಂದು ಜೋಡಿ ಇದೆಲ್ಲ ದಾಖಲೆಯನ್ನು ಮುರಿದು ತಮ್ಮ ಮೊದಲ ರಾತ್ರಿಯ ವಿಡಿಯೋವನ್ನೇ ಅಪ್ ಲೋಡ್ ಮಾಡಿ ಬಿಟ್ಟಿದ್ದಾರೆ.
ರಿಲ್ಸ್ ಆಸೆಗೆ ಬಲಿಯಾಗಿದ್ದ ಈ ಇಬ್ಬರು ಜೋಡಿಗಳು ಮದುವೆಯ ದಿನದ ರಾತ್ರಿಯಂದು ಫಸ್ಟ್ ನೈಟ್ ವಿಡಿಯೋ ಮಾಡಿ ರೀಲ್ಸ್ ನಲ್ಲಿ ಹಾಕಿದ್ದಾರೆ. ಇಬ್ಬರೂ ಇತ್ತೀಚೆಗೆ ಮದುವೆಯಾಗಿದ್ದಾರೆ. ಫಸ್ಟ್ ನೈಟ್ ಮುಗಿದ ಬಳಿಕ ಕೊಠಡಿಯ ವಿಡಿಯೋ ಮಾಡಿ ಅದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ವರನು ವಧುವನ್ನು ಕೇಳುತ್ತಾನೆ, ಫಸ್ಟ್ ನೈಟ್ ಹೇಗಿತ್ತು..ಅಂತ?, ಇದಕ್ಕೆ ಮದುಮಗಳು ಚೆನ್ನಾಗಿತ್ತು ಅಂತ ಹೇಳುತ್ತಾಳೆ, ಬಳಿಕ ಇಬ್ಬರು ಕೂಡ ಹಾಸಿಗೆಯ ಮೇಲಿದ್ದ ಅಲಂಕಾರವನ್ನು ತೋರಿಸಲು ಮುಂದಾಗುತ್ತಾರೆ. ಈ ವಿಡಿಯೋವನ್ನು ಸುನಂದಾ ರಾಯ್ ಅನ್ನುವ ಮಹಿಳೆ ಹಂಚಿಕೊಂಡಿದ್ದಾರೆ. ಈ ಫಸ್ಟ್ ನೈಟ್ ವಿಡಿಯೋ ವೈರಲ್ ಆಗುತ್ತಿದ್ದು ಅನೇಕ ಜನರು ಛೀ..ಥೂ ಅಂತ ಉಗಿಯುತ್ತಿದ್ದಾರೆ. ನಿಮಗೆ ಸ್ವಲ್ಪವೂ ಮಾನ ಮರ್ಯಾದೆ ಅನ್ನೋದು ಇಲ್ವೆ..? ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.