ಮೆಟ್ರೋ, DRDO ವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಯುವಕ..! ಅರೆಸ್ಟ್ ಮಾಡಿದ್ರೆ ದರ್ಶನ್ ಪಕ್ಕದ ಸೆಲ್ ನಲ್ಲೇ​ ಹಾಕಿ ಎಂದು ಮಗನ ಹಠ..! ತಾಯಿಗೆ ಸಂಕಟ..!

ನ್ಯೂಸ್‌ ನಾಟೌಟ್‌: ಮೆಟ್ರೋ, DRDO, IISC ಬ್ಲಾಸ್ಟ್ ಮಾಡುತ್ತೇನೆ ಎಂದು ಯುವಕನೋರ್ವ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದು ಅಕಸ್ಮಾತ್ ನನ್ನನ್ನು ಬಂಧಿಸಿದರೆ ಡಿಬಾಸ್ ದರ್ಶನ್ (Actor Darshan) ಪಕ್ಕದ ಸೆಲ್ ​ಗೆ ಹಾಕಿ ಎಂದು ಮನವಿ ಮಾಡಿದ್ದಾನೆ. ಯುವಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟ ಈ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಗಾಂಧಿನಗರದ ಪೃಥ್ವಿರಾಜ್ ಎಂಬ ಯುವಕ ಈ ವಿಡಿಯೋ ಮಾಡಿದ್ದಾನೆ. ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುವ ಪೃಥ್ವಿರಾಜ್ ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಗೊಂದಲಕ್ಕೊಳಗಾದ ಪೃಥ್ವಿರಾಜ್ ತಾಯಿ 4 ದಿನದ ಹಿಂದೆ ಚಳ್ಳಕೆರೆ ಠಾಣೆಗೆ ಹೋಗಿ ನನ್ನ ಪುತ್ರ ಪೃಥ್ವಿರಾಜ್ ನಾಪತ್ತೆ ಆಗಿದ್ದಾನೆ, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರು ನೀಡಿದ್ದರು. ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ದೂರು ಸ್ವೀಕರಿಸದೆ ವಾಪಸ್ ಕಳಿಸಿದ್ದರು ಎನ್ನಲಾಗದೆ. ಬಳಿಕ ಕೆಲ ದಿನಗಳು ಆದ ನಂತರ ಪೃಥ್ವಿರಾಜ್ ವಾಪಸ್ ತಾಯಿ ಮನೆಗೆ ಬಂದಿದ್ದು ತಾಯಿ ತನ್ನ ಮಗನ ಬಳಿ ಪೊಲೀಸ್ ಠಾಣೆಯಲ್ಲಿ ಆದ ವಿಚಾರವನ್ನು ತಿಳಿಸಿದ್ದಾರೆ. ತನ್ನ ತಾಯಿಯ ದೂರು ಪಡೆಯದೆ ವಾಪಸ್ ಕಳಿಸಿದ್ದಕ್ಕೆ ಕೆಂಡವಾಗಿದ್ದ ಪೃಥ್ವಿರಾಜ್, ಚಳ್ಳಕೆರೆ ಠಾಣೆ ಬಳಿಗೆ ತೆರಳಿ ವಿಡಿಯೋ ಮಾಡಿದ್ದಾನೆ. ದೂರು ಯಾಕೆ ಸ್ವೀಕರಿಸಿಲ್ಲ ಎಂದು ಪ್ರಶ್ನಿಸಿದ್ದಾನೆ. ಪೊಲೀಸರು ಮೊಬೈಲ್ ಆಫ್ ಮಾಡು ಎಂದರೂ ಮಾತು ಕೇಳಿರಲಿಲ್ಲ. ಕೊನೆಗೆ ಪೃಥ್ವಿರಾಜ್ ನನ್ನು ಹಿಡಿದು ಮೊಬೈಲ್ ಕಸಿದುಕೊಂಡು ಪೊಲೀಸರು ಬುದ್ದಿ ಹೇಳಿದ್ದರು ಎನ್ನಲಾಗಿದೆ. ಇನ್ನು ಇಷ್ಟೆಲ್ಲಾ ಆದ ಬಳಿಕ ಪೃಥ್ವಿರಾಜ್, ಪೊಲೀಸ್ ಠಾಣೆಯಿಂದ ಮತ್ತೊಂದು ವಿಡಿಯೋ ಮಾಡಿದ್ದಾನೆ. ನಾವು ಪೊಲೀಸರಿಗೆ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರು ನನಗೆ ನಾಯಿಗೆ ಹೊಡೆದಂತೆ ಹೊಡೆದಿದ್ದಾರೆ. ನನ್ನ ತಾಯಿಯ ಎದುರೇ ಠಾಣೆಯೊಳಗೆ ಹಿಡಿದೊಯ್ದು ಹಲ್ಲೆ ಮಾಡಿದ್ದಾರೆ. ನಾನು ಎಸ್ಪಿ, ಡಿಸಿ ಬಳಿಗೆ ಹೋಗಿ ನ್ಯಾಯ ಕೇಳುತ್ತೇನೆ. ನ್ಯಾಯ ಸಿಗದಿದ್ದರೆ ಏನು ಮಾಡಬೇಕೆಂದು ಗೊತ್ತಿದೆ. ಡಿಪ್ಲೊಮಾ ಅನ್ ಕಂಪ್ಲೀಟ್ ಆಗಿದ್ದರೂ ಎಲೆಕ್ಟ್ರಿಕಲ್ ಕೆಲಸ ಗೊತ್ತು. ಬೆಂಗಳೂರಿನ ಮುಖ್ಯ ಕೆಂದ್ರಗಳಿಗೆ ಎಲ್ಲಿಂದ ವಿದ್ಯುತ್ ಕನೆಕ್ಷನ್ ಇದೆ ಗೊತ್ತು. ರಾಜಭವನ, ವಿಧಾನಸೌಧ, ಮೆಟ್ರೋ, ಇಸ್ರೋ, ಡಿಆರ್​ಡಿಓ ಎಲ್ಲಾ ಗೊತ್ತು. ಎಲ್ಲಿ ಏನು ಮಾಡಿದರೆ ಬ್ಲಾಸ್ಟ್ ಆಗುತ್ತದೆಂದು ಗೊತ್ತು. ನ್ಯಾಯ ಸಿಗದಿದ್ದರೆ ನಾನು ಟೆರರಿಸ್ಟ್ ಆಗುತ್ತೇನೆಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೃಥ್ವಿರಾಜ್ ಹರಿಬಿಟ್ಟಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ ಎನ್ನಲಾಗಿದೆ. Click