- +91 73497 60202
- [email protected]
- November 22, 2024 3:01 PM
ನಾಯಿಗೆ ಹೊಟ್ಟೆತುಂಬ ಊಟ ಕೊಟ್ಟು ಜೈಲು ಪಾಲಾದ ಮಹಿಳೆ..! ಏನಿದು ವಿಚಿತ್ರ ಪ್ರಕರಣ..?
ನ್ಯೂಸ್ ನಾಟೌಟ್: ಮಹಿಳೆಯೊಬ್ಬರು ತನ್ನ ಸಾಕು ನಾಯಿಗೆ ಸಿಕ್ಕ ಸಿಕ್ಕ ಆಹಾರವನ್ನೆಲ್ಲ ತಿನ್ನಿಸಿ ಅದರ ಪ್ರಾಣವನ್ನು ತೆಗೆದ ಕಾರಣಕ್ಕೆ ಆಕೆಗೆ ಜೈಲು ಶಿಕ್ಷೆ ವಿಧಿಸಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ನ್ಯೂಜಿಲೆಂಡ್ನ ಮಹಿಳೆ ತಾನು ಸಾಕಿದ ನಾಯಿಗೆ ಅಗತ್ಯಕ್ಕಿಂತ ಹೆಚ್ಚು ಆಹಾರ ನೀಡಿದ ಪರಿಣಾಮ ಶ್ವಾನ ಮೃತಪಟ್ಟಿದ್ದು, ಮಹಿಳೆಗೆ ಎರಡು ತಿಂಗಳುಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಮನುಕೌ ಜಿಲ್ಲಾ ನ್ಯಾಯಾಲಯವು ನಾಯಿಯ ವೈದ್ಯಕೀಯ ಮತ್ತು ದೈಹಿಕ ಅಗತ್ಯಗಳನ್ನು ಪೂರೈಸಲು ವಿಫಲರಾದ ಮಹಿಳೆಗೆ 720 ಡಾಲರ್ ದಂಡ ವಿಧಿಸಿ, ಒಂದು ವರ್ಷದವರೆಗೆ ನಾಯಿಗಳನ್ನು ಸಾಕದಂತೆ ನಿರ್ಬಂಧ ವಿಧಿಸಿದೆ. ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್ (SPCA) ಪ್ರಕಾರ , ನಾಯಿ ಹೆಚ್ಚು ಬೊಜ್ಜು ಹೊಂದಿತ್ತು. 2021ರಲ್ಲಿ ಪೊಲೀಸರು ಆಕ್ಲೆಂಡ್ನಲ್ಲಿದ್ದ ಮಹಿಳೆಯ ಮನೆಗೆ ಹೋದಾಗ ಅಲ್ಲಿ ಆ ನಾಯಿ ಸೇರಿದಂತೆ ಅನೇಕ ನಾಯಿಗಳಿದ್ದವು. ಆ ನಾಯಿ ಎಷ್ಟು ಅಧಿಕ ತೂಕ ಹೊಂದಿತ್ತೆಂದರೆ, ಅದಕ್ಕೆ ಓಡಾಡಲು ಕೂಡ ಆಗುತ್ತಿರಲಿಲ್ಲ. ಆರಂಭದಲ್ಲಿ ಸುಮಾರು 54 ಕಿಲೋಗ್ರಾಂಗಳಷ್ಟು ತೂಕವಿತ್ತು. “ದುಃಖಕರ ವಿಚಾರವೆಂದರೆ ನಾವು ದಿನನಿತ್ಯ ಕಡಿಮೆ ತೂಕ, ಹಸಿವಿನಿಂದ ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿರುವ ಪ್ರಾಣಿಗಳನ್ನು ನೋಡುತ್ತೇವೆ. ಆದರೆ, ಅತಿಯಾಗಿ ತಿಂದ ಪರಿಣಾಮ ಅಸಹಾಯಕವಾಗಿದ್ದ ಪ್ರಾಣಿಯನ್ನು ನೋಡುವುದು ಕೂಡ ಅಷ್ಟೇ ಹೃದಯವಿದ್ರಾವಕವಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ