- +91 73497 60202
- [email protected]
- November 24, 2024 4:52 PM
ನ್ಯೂಸ್ ನಾಟೌಟ್: ಮನೆಯೂಟಕ್ಕೆ ಅನುಮತಿ ನೀಡಬೇಕೆಂದು ಕೋರಿ ನಟ ದರ್ಶನ್ (Darshan) ಸಲ್ಲಿಸಿದ್ದ ಅರ್ಜಿ ಇಂದು(ಜು.29) ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಮನೆಯೂಟ, ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಜುಲೈ 25 ರಂದು ವಜಾಗೊಳಿಸಿತ್ತು. (Darshan Thoogudeepa). ಅರ್ಜಿ ವಜಾಗೊಂಡ ಬೆನ್ನಲ್ಲೇ ಹೈಕೋರ್ಟ್‌ನಲ್ಲಿ (High Court) ದರ್ಶನ್ ಪರ ವಕೀಲರ ಅರ್ಜಿ ಸಲ್ಲಿಸಿದ್ದರು. ಕಾನೂನಿಗೆ ಎಲ್ಲರೂ ಒಂದೇ, ಕೈದಿಗಳಲ್ಲಿ ಯಾವುದೇ ಭೇದವಿಲ್ಲ. ಆಸ್ತಿ ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದಾಗ ಮಾತ್ರ ವಿಚಾರಣಾಧೀನ ಕೈದಿಗಳಿಗೆ ಮನೆಯೂಟ ನೀಡಬಹುದು. ಆದರೆ ಕೊಲೆ ಪ್ರಕರಣದ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲ. ದರ್ಶನ್ ವಿಚಾರದಲ್ಲಿ ಮೂಲಭೂತ ಹಕ್ಕಿಗೆ ಧಕ್ಕೆ ಕಂಡು ಬಂದಿಲ್ಲ. ಜೈಲಿನ ಊಟ ಕಳಪೆ ಗುಣಮಟ್ಟ ಎಂಬ ಆರೋಪ ಕೇಳಿಬಂದಿಲ್ಲ. ದರ್ಶನ್‌ಗೆ ಜೈಲಿನಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದು ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಮನುಷ್ಯನಿಗೆ ಬೇಕಾದ ಪೌಷ್ಠಿಕಾಂಶ ಜೈಲಿನ ಊಟ ಒಳಗೊಂಡಿದೆ. ನ್ಯಾಯಾಂಗ ಬಂಧನ ದಿನದಿಂದಲೇ ಆರೋಗ್ಯ (Health) ಸಮಸ್ಯೆ ಒಪ್ಪಲಾಗಲ್ಲ. ದರ್ಶನ್ ಬೆಡ್ ರೆಸ್ಟ್ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ. ಬೇರೇನೂ ಹೇಳಿಲ್ಲ. ಪ್ರೋಟಿನ್ ಡಯಟ್ ಕೊಡಬೇಕೆಂದು ವೈದ್ಯರು ಹೇಳಿಲ್ಲ ಎನ್ನಲಾಗಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ