ಪುಟ್ಟ ಮಗುವಿಗೆ ಕೈದಿ ಸಂಖ್ಯೆ 6106 ಎಂದು ಬಟ್ಟೆ ತೊಡಿಸಿ ಫೋಟೋಶೂಟ್..! ದರ್ಶನ್ ಅಭಿಮಾನಿಗಳ ಹುಚ್ಚಾಟಕ್ಕೆ ಜನಾಕ್ರೋಶ..!

ನ್ಯೂಸ್‌ ನಾಟೌಟ್‌: ನಟ ದರ್ಶನ್ ಅಭಿಮಾನಿಗಳ ಹುಚ್ಚಾಟಕ್ಕೆ ದರ್ಶನ್ ಗೆ ನೀಡಲಾಗಿರುವ ಕೈದಿ ನಂಬರ್ 6106 ಅನ್ನು ಇತ್ತೀಚೆಗೆ ವಾಹನಗಳಲ್ಲಿ ಸ್ಟಿಕ್ಕರ್ ಮಾಡಿಸಿ ಹಾಕಿಕೊಂಡು ಅದು ಟ್ರೆಂಡ್ ಆಗಿತ್ತು ಮತ್ತು ಪೊಲೀಸರು ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು. ಈಗ ಏನೂ ಅರಿಯದ ಮುಗ್ಧ ಮಗುವೊಂದಕ್ಕೆ ಅಪರಾದಿಯಂತೆ ಬಿಳಿ ಡ್ರೆಸ್ ಹಾಕಿಸಿ, ಅದರ ಮೇಲೆ ಕೈದಿ ನಂ.6106 ಎಂದು ಬರೆಯಲಾಗಿದೆ. ಇತ್ತೀಚೆಗೆ ದರ್ಶನ್ ತಾಯಿ ಪರಪ್ಪನ ಅಗ್ರಹಾರಕ್ಕೆ ಬಂದು ಮಗನನ್ನು ಭೇಟಿಯಾಗಿದ್ದರು, ಇದರ ಜೊತೆಗೆ ಜೈಲು ಸೇರಿದಾಗಿನಿಂದ ವಿಕಲಚೇತನರೂ ಸೇರಿದಂತೆ ಹಲವು ಅಭಿಮಾನಿಗಳು ದರ್ಶನ್ ನನ್ನು ನೋಡಲು ಜೈಲಿಗೆ ಬರುತ್ತಿದ್ದು, ಅನುಮತಿ ಸಿಗದೆ ನಿರಾಶರಾಗುತ್ತಿದ್ದಾರೆ. ಇದರ ಜೊತೆಗೆ ಅತಿಯಾದ ಅಭಿಮಾನದಿಂದ ಅತಿರೇಕದ ಕೆಲಸಗಳನ್ನು ಮಾಡುತ್ತಾ ದರ್ಶನ್ ಫ್ಯಾನ್ಸ್ ಮತ್ತೆ ಸುದ್ದಿಯಾಗುತ್ತಿದ್ದಾರೆ. View this post on Instagram A post shared by Brand of sandalwood DBOSS FanS ( Mysore) (@brand_of_sandalwood) ‘Brand of sandalhood dboss fans Mysore’ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮೂಲಕ ಕೈದಿ ಸಂಖ್ಯೆಯ ಬಟ್ಟೆ ಹಾಕಿರುವ ಮಗುವಿನ ಫೋಟೋ ಹಂಚಿಕೊಳ್ಳಲಾಗಿದೆ. ಒಂದು ವರ್ಷದ ಮಗವಿಗೆ ಕೈದಿ ರೀತಿಯ ಬಟ್ಟೆ ಹಾಕಿ ಪೋಟೋಶೂಟ್ ಮಾಡಿಸಲಾಗಿದೆ. ದರ್ಶನ್ ​ಗೆ ನೀಡಿರೋ ವಿಚಾರಣಾಧೀನ ಕೈದಿ ಸಂಖ್ಯೆಯನ್ನು ಮಗುವಿಗೆ ಹಾಕಲಾಗಿದೆ. ಕೈಗೆ ಕೋಳ ಮಾದರಿ ಕೂಡ ಇಡಲಾಗಿದೆ. ಅಲ್ಲಿಯೇ ‘ಜೈ ಡಿಬಾಸ್’ ಎಂದು ಬರೆಯಲಾಗಿದೆ. ಇದಕ್ಕೆ ದರ್ಶನ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಜನರು ಆಕ್ರೋಶ ಹೊರಹಾಕಿದ್ದಾರೆ. Click 👇