ದರ್ಶನ್ ಪ್ರಕರಣ: ಕೈದಿ ನಂಬರ್ ‘D 6106’ ಎಂದು ಹೇರ್ ಕಟಿಂಗ್‌ ಮಾಡಿಸಿಕೊಂಡ ಅಭಿಮಾನಿ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಇನ್ನು ದರ್ಶನ್‌ ಗೆ ನೀಡಿರುವ ವಿಚಾರಣಾಧೀನ ಕೈದಿ ನಂಬರ್‌ 6106 ಅನ್ನು ವಾಹನಗಳಲ್ಲಿ, ಬಟ್ಟೆಗಳಲ್ಲಿ ಹಾಕಿಕೊಂಡು ಅಂಧಾಭಿಮಾನ ಮೆರೆಯುತ್ತಿದ್ದಾರೆ. ಹೇರ್ ಕಟಿಂಗ್‌ ಶಾಪ್‌ ವೊಂದಲ್ಲಿ ಯುವಕನೊಬ್ಬ ತಲೆಯಲ್ಲಿ ದರ್ಶನ್ ನ ಕೈದಿ ನಂಬರ್‌ ಬರೆಸಿಕೊಂಡು ವಿಡಿಯೋ ಮಾಡಿಸಿದ್ದಾನೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಈ ಮೂಲಕ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಮತ್ತೊಂದೆಡೆ ಪತ್ನಿ ವಿಯಲಕ್ಷ್ಮಿ & ಕುಟುಂಬಸ್ಥರು ಜೈಲು ಸೇರಿರುವ ದರ್ಶನ್‌ನನ್ನು ಹೊರತರಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. View this post on Instagram A post shared by V∆ green's unisex salon (@_greens_unisex_salon_) ಪೊಲೀಸರು ಇಂಥವರ ಮೇಲೆ ಹಲವು ಕಡೆಗಳಲ್ಲಿ ಕ್ರಮ ಕೈಗೊಂಡಿದ್ದಾರೆ. ವಾಹನಗಳಿಗೆ ಹಾಕಿಸಿದ್ದ ಕೈದಿ ನಂಬರ್ ಗಳನ್ನು ತೆಗೆಸಿದ್ದಾರೆ. ಈ ನಡುವೆಯೇ ಕೆಲವರು ದರ್ಶನ್‌ಗೆ ನೀಡಿರುವ ವಿಚಾರಣಾಧೀನ ಕೈದಿ ನಂಬರ್ 6106 ಅಚ್ಚೆ ಹಾಕಿಸಿಕೊಳ್ಳುವುದು, ಮಕ್ಕಳ ಬಟ್ಟೆಗಳ ಮೇಲೆ ಬರೆಸುವುದು, ವಾಹನಗಳ ಮೇಲೆ ಹಾಕಿಸಿಕೊಳ್ಳುವುದು ಹೆಚ್ಚಾಗಿದೆ. Click 👇