- +91 73497 60202
- [email protected]
- November 22, 2024 1:11 AM
ದಕ್ಷಿಣ ಕನ್ನಡ: ನಾಪತ್ತೆಯಾಗಿದ್ದ ಯುವತಿ ಮುಸ್ಲಿಂ ಯುವಕನ ಜೊತೆ ಪತ್ತೆ..! ಲವ್ ಜಿಹಾದ್ ಮಾಡಲಾಗಿತ್ತು ಎಂದ ಫೋಷಕರು..!
ನ್ಯೂಸ್ ನಾಟೌಟ್: ನಾಪತ್ತೆಯಾಗಿದ್ದ ಯುವತಿಯನ್ನು ಪೊಲೀಸರು ಪತ್ತೆ ಹಚ್ಚಿದ ನಂತರ ಆಕೆ ಅನ್ಯ ಸಮುದಾಯದ ಯುವಕನೊಂದಿಗೆ ಇರುವುದು ಕಂಡುಬಂದಿದ್ದು, ಇದು ‘ಲವ್ ಜಿಹಾದ್’ ಎಂದು ಆಕೆಯ ಪೋಷಕರು ಹಾಗೂ ವಿಹೆಚ್ ಪಿ ಆರೋಪಿಸಿರುವ ಘಟನೆ ದಕ್ಷಿಣ ಕನ್ನಡದಲ್ಲಿ ಬುಧವಾರ(ಜುಲೈ 10) ವರದಿಯಾಗಿದೆ. ಈ ಸಂಬಂಧ ಕಾಲೇಜಿಗೆ ಹೋಗುತ್ತಿದ್ದ ತನ್ನ ಮಗಳನ್ನು ಯುವಕ ಅಪಹರಿಸಿ ಮತಾಂತರ ಮಾಡಿದ್ದಾನೆ ಎಂದು ಮಂಗಳೂರು ಪೊಲೀಸರ ಜೊತೆ ಯುವತಿ ತಂದೆ ಆರೋಪಿಸಿದ್ದಾರೆ. ಇದು ಲವ್ ಜಿಹಾದ್ ಪ್ರಕರಣ ಎಂದು ವಿಎಚ್‌ಪಿ ಕೂಡ ಆರೋಪಿಸಿದೆ. ಯುವತಿ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಇತ್ತೀಚೆಗೆ ಕಣ್ಮರೆಯಾದ ನಂತರ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ಪೊಲೀಸರು ನಾಪತ್ತೆಯಾದ ಯುವತಿಯನ್ನು ಪತ್ತೆ ಹಚ್ಚಿದಾಗ ಆಕೆ ಮೊಹಮ್ಮದ್ ಅಶ್ಫಾಕ್ ಎಂಬ ಯುವಕನೊಂದಿಗೆ ಇದ್ದದ್ದು ಕಂಡುಬಂದಿದೆ. ಪೊಲೀಸರು ಯುವಕ ಹಿನ್ನೆಲೆಯನ್ನು ಪರಿಶೀಲಿಸಿದಾಗ ಆತ ಈಗಾಗಲೇ ಮದುವೆಯಾಗಿದ್ದು, ಕೇರಳದ ಕಾಸರಗೋಡು ನಗರದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎಂಟು ಕ್ರಿಮಿನಲ್ ಪ್ರಕರಣಗಳಿವೆ ಎನ್ನಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ