ನ್ಯೂಸ್ ನಾಟೌಟ್: ಬಯಲು ಶೌಚಕ್ಕಾಗಿ ಬುಧ್ವಾ ಅರಣ್ಯದ ಬಳಿಯ ಗಂಡಕ್ ಕಾಲುವೆಯ ದಡದಲ್ಲಿ ಕುಳಿತಿದ್ದ ವೃದ್ಧನ ಮೇಲೆ ಮೊಸಳೆಯೊಂದು ದಾಳಿ ಮಾಡಿದೆ.
ಬಯಲು ಶೌಚದ ವೇಳೆ ಮೊಸಳೆ ದಾಳಿಯಿಂದ ತನ್ನ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ವ್ಯಕ್ತಿ ಎದ್ದು ನಿಂತಾಗ ಮೊಸಳೆ ಅವನ ಖಾಸಗಿ ಅಂಗವನ್ನು ಕಚ್ಚಿ ಎಳೆದಿದ್ದರಿಂದ ಆ ಭಾಗ ಕಾಲುವೆಯಲ್ಲಿ ತೇಲಿ ಹೋಗಿದೆ ಎನ್ನಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃದ್ಧನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಉತ್ತರ ಪ್ರದೇಶದ ಕುಶಿನಗರದ ಬುಧ್ವಾ ಅರಣ್ಯದ ಬಳಿಯ ಗಂಡಕ್ ಕಾಲುವೆಯ ದಡದಲ್ಲಿ ಈ ಘಟನೆ ನಡೆದಿದೆ.
60 ವರ್ಷದ ವ್ಯಕ್ತಿ ಶೌಚಕ್ಕಾಗಿ ಬುಧ್ವಾ ಅರಣ್ಯದ ಬಳಿಯ ಗಂಡಕ್ ಕಾಲುವೆಯ ದಡದಲ್ಲಿ ಕುಳಿತಿದ್ದಾಗ ಮೊಸಳೆ ನೀರಿನಿಂದ ಹೊರ ಬಂದು ದಾಳಿ ಮಾಡಿದೆ. ಘಟನೆಯ ಬಳಿಕ ವ್ಯಕ್ತಿಯ ಕಿರುಚಾಟವನ್ನು ಕೇಳಿದ ಗ್ರಾಮಸ್ಥರು ಸಹಾಯಕ್ಕೆ ಬಂದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
Click 👇