ನ್ಯೂಸ್ ನಾಟೌಟ್: ಜುಲೈ 23 ರಂದು ಅಂದರೆ ನಾಳೆ ಮಂಗಳವಾರ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ದೇಶದ ಕೋಟಿಗಟ್ಟಲೆ ಜನರು ಈ ಬಜೆಟ್ನಿಂದ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ಮೋದಿ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಬಡವರು, ರೈತರಿಂದ ಹಿಡಿದು ಜನಸಾಮಾನ್ಯರವರೆಗೂ ಎಲ್ಲರಿಗೂ ಬಜೆಟ್ನಲ್ಲಿ ದೊಡ್ಡ ಕೊಡುಗೆ ಸಿಗಲಿದೆ ಎಂಬ ಭರವಸೆ ವ್ಯಕ್ತವಾಗಿದೆ. ತೆರಿಗೆದಾರರು ವಿಶೇಷವಾಗಿ ಸರ್ಕಾರದಿಂದ ಆದಾಯ ತೆರಿಗೆಯಲ್ಲಿ ದೊಡ್ಡ ಪರಿಹಾರವನ್ನು ಪಡೆಯಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸದ್ಯ 7 ಲಕ್ಷ ಆದಾಯದ ಮೇಲೆ ತೆರಿಗೆ ಇಲ್ಲ. ಸರ್ಕಾರ ಮತ್ತಷ್ಟು ಈ ಮೀತಿ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾಂಕ್ರಾಮಿಕ ರೋಗದ ನಂತರ ಮೊದಲ ಬಾರಿಗೆ, ಜಿಎಸ್ಟಿ ಸಂಗ್ರಹದ ಬೆಳವಣಿಗೆ ದರವು ಎರಡಂಕಿಗಳಿಗಿಂತ ಕಡಿಮೆಯಾಗಿದೆ ಎಂದು ಡೇಟಾ ಬಹಿರಂಗವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಬಳಕೆಯನ್ನು ಹಣದುಬ್ಬರ ಹೆಚ್ಚಿಸುವ ಅವಶ್ಯಕತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Click 👇