ನ್ಯೂಸ್ ನಾಟೌಟ್: ಗ್ರಾಹಕನೊಬ್ಬ ಕ್ಯಾಬ್ ಬುಕ್ ಮಾಡಿ ಕಾರ್ ಡ್ರೈವರ್ ಹೆಸರು ಕೇಳಿ ಬುಕಿಂಗ್ ರದ್ದು ಮಾಡಿದ್ದಾನೆ. ನಗರಗಳಲ್ಲಿ ಜನರು ಬಸ್ ಮತ್ತು ಆಟೋಗಳಿಗಿಂತ ಹೆಚ್ಚು ಕ್ಯಾಬ್ಗಳನ್ನು ಬುಕ್ ಮಾಡಿಕೊಂಡು ಹೋಗುತ್ತಾರೆ. ಇದು ತುಂಬಾ ಸುಲಭ ಮತ್ತು ಕಡಿಮೆ ದರಗಳಲ್ಲಿ ಹೋಗಬಹುದು ಎಂಬ ಅಭಿಪ್ರಾಯವೂ ಇದೆ.
ಅಲ್ಲದೇ ಓಲಾ ಮತ್ತು ಉಬರ್ನಂತಹ ಕ್ಯಾಬ್ ಕಂಪನಿಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ರೈವರ್ ಹೆಸರುಗಳು ಮತ್ತು ಸ್ಥಳಗಳ ಬಗ್ಗೆ ಮೊದಲೇ ಮಾಹಿತಿ ನೀಡುತ್ತವೆ. ಗ್ರಾಹಕರು ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸುವ ಆಯ್ಕೆಯನ್ನು ಸಹ ಹೊಂದಿದ್ದಾರೆ. ಆದರೆ ಈ ಸುರಕ್ಷತೆಯ ಸೌಲಭ್ಯಗಳು ಈಗ ಕ್ಯಾಬ್ ಕಂಪನಿಗಳಿಗೆ ಸಮಸ್ಯೆಯನ್ನುಂಟುಮಾಡಿದೆ. ಯಾಕೆಂದರೆ ಕ್ಯಾಬ್ ಡ್ರೈವರ್ ಹೆಸರು ತಿಳಿದು ವ್ಯಕ್ತಿಯೊಬ್ಬ ಬುಕ್ಕಿಂಗ್ ಅನ್ನು ರದ್ದು ಮಾಡಿದ್ದು, ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ವೈರಲ್ ಪೋಸ್ಟ್ ಅನ್ನು @timepassstruggler ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ “ಯಮರಾಜ ಆಗಮಿಸಿದ್ದಾರೆ ಮತ್ತು ನಿಮ್ಮ ಸ್ಥಳದಲ್ಲಿ ಕಾಯುತ್ತಿದ್ದಾರೆ” ಎಂದು ಬರೆಯಲಾಗಿತ್ತು. ಈ ಬಗ್ಗೆ ನೀಡಿದ ವಿವರಣೆಯಲ್ಲಿ ಕರ್ನಾಟಕದಲ್ಲಿ ಯಾರೋ ಒಬ್ಬರು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಚಾಲಕನ ಹೆಸರು ʼಯಮರಾಜʼ ಎಂದು ನೋಡಿದ ನಂತರ ಅದನ್ನು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ. ಈಗ ಇದು ತೀವ್ರ ಚರ್ಚೆಗೆ ಕಾರಣವಾಗಿದೆ.