ನ್ಯೂಸ್ ನಾಟೌಟ್: ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕ ಸಂಘ (ರಿ) ಬಿಎಂಎಸ್ ಸಂಯೋಜಿತ ಆಶ್ರಯದಲ್ಲಿ ಬಿಎಂಎಸ್ ನ 70ನೇ ವರ್ಷದ ಸ್ಥಾಪನಾ ದಿನಾಚರಣೆಯನ್ನು ಜು.23ರಂದು ಆಚರಿಸಲಾಯಿತು.
ಹಳೆಗೇಟಿನಲ್ಲಿರುವ ಕಾರ್ಮಿಕ ಸಮುದಾಯ ತಿಲಕ ಭವನದಲ್ಲಿ ಕಾರ್ಯಕ್ರಮ ನೆರವೇರಿತು. ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಸ್ಥಾಪಕಾಧ್ಯಕ್ಷ ಗೋಪಾಲ ಕೃಷ್ಣ ಭಟ್, ಕಾನೂನು ಸಲಹೆಗಾರ ಭಾಸ್ಕರ್ ರಾವ್, ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಉಬರಡ್ಕ , ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಕೋಶಾಧಿಕಾರಿ ನಿತ್ಯಾನಂದ ಬಿ ಉಪಸ್ಥಿತರಿದ್ದರು. ಸುರೇಂದ್ರ ಕಾಮತ್ ಸ್ವಾಗತಿಸಿದರು. ಚಂದ್ರಶೇಖರ ಮರ್ಕಂಜ ವಂದಿಸಿದರು.
ಬಿಎಂಎಸ್ ಸುಳ್ಯ ತಾಲೂಕಿನ ಆಟೋ ರಿಕ್ಷಾ ಚಾಲಕ ಸಂಘದ ಘಟಕಗಳಾದ ಜಾಲ್ಸೂರು, ಪಂಜ , ಸುಬ್ರಹ್ಮಣ್ಯ , ಹರಿಹರ, ಗುತ್ತಿಗಾರು , ಕುಕ್ಕುಜಡ್ಕ , ಪೆರಾಜೆ, ಕಲ್ಲುಗುಂಡಿಗಳಲ್ಲಿ ಕ್ರಮವಾಗಿ ಪ್ರತ್ಯೇಕವಾಗಿ ಬಿಎಂಎಸ್ ಸ್ಥಾಪಕ ದಿನವನ್ನು ಏಕಕಾಲದಲ್ಲಿ ಆಚರಿಸಲಾಯಿತು.