ನ್ಯೂಸ್ ನಾಟೌಟ್: ಮದುವೆಯಾಗಲು ನಿರಾಕರಿಸಿದ ಯುವಕನ ಮರ್ಮಾಂಗವನ್ನೇ ಯುವತಿಯೊಬ್ಬಳು ಕತ್ತರಿಸಿರುವ ಘಟನೆ ಬಿಹಾರದ ಪಟ್ನಾದ ಸರನ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ನಡೆದ ಕೂಡಲೇ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ವಿಚಾರಣೆ ನಡೆಸಲಾಗುತ್ತಿದೆ. ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಜುಲೈ 1ರಂದು ಛಾಪ್ರಾದ ನ್ಯಾಯಾಲಯದಲ್ಲಿ ವಿವಾಹ ನೋಂದಣಿ ಮಾಡಿಕೊಳ್ಳಲು ಇವರಿಬ್ಬರು ನಿರ್ಧರಿಸಿದ್ದರು. ಆದರೆ, ವ್ಯಕ್ತಿ ನ್ಯಾಯಾಲಯಕ್ಕೆ ಬಂದಿರಲಿಲ್ಲ, ಇದರಿಂದ ಯುವತಿ ಸಿಟ್ಟಿಗೆದ್ದಿದ್ದಳು ಎಂದು ತಿಳಿದು ಬಂದಿದೆ.
‘26 ವರ್ಷದ ಮಹಿಳೆಯು 30 ವರ್ಷದ ವ್ಯಕ್ತಿಯೊಂದಿಗೆ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು. ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಆತ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಮದುವೆಯಾಗಲು ನಿರಾಕರಿಸಿದ್ದರಿಂದ ಆತನ ಮರ್ಮಾಂಗ ಕತ್ತರಿಸಿದ್ದೇನೆ’ ಎಂದು ಮಹಿಳೆ ತಪ್ಪೊಪ್ಪಿಕೊಂಡಿರುವುದಾಗಿ ವರದಿಯಾಗಿದೆ.