ನ್ಯೂಸ್ ನಾಟೌಟ್: ಕೆಲ ದಿನಗಳಿಂದ ಬೆಂಗಳೂರಿನ(Bengaluru)ಜನರ ಮೊಬೈಲ್ಗಳಿಗೆ (Mobile) ವಿದೇಶಿ ನಂಬರ್ಗಳಿಂದ ಅಪರಿಚಿತ ಕರೆಗಳು ಬರುತ್ತಿದ್ದು, ವಾಟ್ಸಾಪ್ ಕರೆ ಮಾಡುತ್ತಿರುವ ಅಪರಿಚಿತ ವ್ಯಕ್ತಿಗಳು, ಪೊಲೀಸ್ (Police) ಠಾಣೆಯಿಂದ ಮಾತನಾಡ್ತಿದ್ದೇವೆ. ನಿಮ್ಮ ಮಗ ಅಥವಾ ಮಗಳನ್ನ ಡ್ರಗ್ಸ್ ಕೇಸ್ನಲ್ಲಿ ಅರೆಸ್ಟ್ ಮಾಡಿದ್ದೇವೆ. ಕೂಡಲೇ ನಮ್ಮ ಅಕೌಂಟ್ಗೆ ಹಣ ಹಾಕಿ ಇಲ್ಲದಿದ್ರೆ, FIR ಮಾಡ್ತೀವಿ ಅಂತಾ ಧಮ್ಕಿ ಹಾಕುತ್ತಿದ್ದಾರೆ ಎನ್ನಲಾಗಿದೆ.
ಇದೇ ರೀತಿ ಬೆಂಗಳೂರಿನ ಸೈಯದ್ ಸಮೀನ್ ಎಂಬವರಿಗೂ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಗಳು ನಿಮ್ಮ ಮಗಳನ್ನ ಬಂಧಿಸಿದ್ದೇವೆ. ಹಣ ಹಾಕಿ ಅಂತಾ ಬೆದರಿಸಿದ್ದಾರೆ. ಸದ್ಯ ಸೈಯದ್ ಸಮೀನ್ ಈ ಬಗ್ಗೆ ಸೈಬರ್ ಕ್ರೈಂಗೆ ದೂರು(Complaint to Cybercrime) ಸಲ್ಲಿಸಿದ ಬಳಿಕ ಇಂತಹ ಹಲವು ಪ್ರಕರಣಗಳು ಕೆಲದಿನಗಳಿಂದೀಚೆಗೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಮುಂಬೈಯಲ್ಲಿ ಇಂತಹದ್ದೇ ಪ್ರಕರಣ ನಡೆದು ಒಬ್ಬರು ಮಹಿಳೆ ಸುಮಾರು 8೦ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಇಂತಹ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಸೈಬರ್ ಪೊಲೀಸರಿಗೆ ತಿಳಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
Click 👇