ಒಂಟಿತನದಿಂದ ಬೇಸತ್ತು ವಾರಾಂತ್ಯದಲ್ಲಿ ಆಟೊ ಚಲಾಯಿಸುತ್ತಿರುವ ಮೈಕ್ರೊಸಾಫ್ಟ್‌ ಟೆಕ್ಕಿ..! ಇಲ್ಲಿದೆ ಸ್ವಾರಸ್ಯಕರ ಸಂಗತಿ..!

ನ್ಯೂಸ್‌ ನಾಟೌಟ್‌: ಮೈಕ್ರೊಸಾಫ್ಟ್‌ ಟೆಕ್ಕಿಯೊಬ್ಬರು ತಮ್ಮ ಒಂಟಿತನ ನೀಗಿಕೊಳ್ಳಲು ವಾರಾಂತ್ಯದಲ್ಲಿ ಆಟೊ ಚಲಾಯಿಸುತ್ತಿದ್ದು, ತಂತ್ರಜ್ಞಾನ ಬೆಳೆದಷ್ಟೂ, ಮಾನಸಿಕ ಖಿನ್ನತೆ, ಒಂಟಿತನದ ಪ್ರಕರಣಗಳೂ ಏರಿಕೆಯಾಗುತ್ತಿರುವುದು ಶೋಚನೀಯ. ಜನರನ್ನು ಹತ್ತಿರ ಮಾಡಬೇಕಿದ್ದ ಸಂಪರ್ಕ ಸಾಧನಗಳೇ ಜನರನ್ನು ದೂರ ಮಾಡುತ್ತಿವೆ. ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವೆಂಕಟೇಶ್ ಗುಪ್ತ ಎಂಬ ಟೆಕ್ಕಿಯೊಬ್ಬರು, “ವಾರಾಂತ್ಯದಲ್ಲಿ ತಮ್ಮ ಒಂಟಿತನವನ್ನು ನೀಗಿಕೊಳ್ಳಲು ಕೋರಮಂಗಲದ ಮೈಕ್ರೊಸಾಫ್ಟ್‌ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿರುವ 35 ವರ್ಷದ ಸಾಫ್ಟ್‌ವೇರ್ ಸಿಬ್ಬಂದಿಯೊಬ್ಬರು ಆಟೊ ಚಲಾಯಿಸುತ್ತಿರುವುದನ್ನು ಕಂಡೆ” ಎಂದು ಬರೆದುಕೊಂಡಿದ್ದಾರೆ. ಹಲವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ವಿದೇಶಗಳಲ್ಲಿ ವಾರಾಂತ್ಯದ ದಿನಗಳಲ್ಲಿ ವೃತ್ತಿಪರರು ಊಬರ್ ವಾಹನಗಳನ್ನು ಚಲಾಯಿಸುವುದು ಸಾಮಾನ್ಯ ಸಂಗತಿಯಾಗಿದೆ‌. ಇದು ಹಣದ ಗಳಿಕೆಯನ್ನು ಮೀರಿದ್ದು ಎಂದಿದ್ದಾರೆ. Click 👇