ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಗೆ ಮತ್ತೆ ಕೋವಿಡ್‌ ದೃಢ..! ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಿಂದ ಅಧಿಕೃತ ಘೋಷಣೆ

ನ್ಯೂಸ್ ನಾಟೌಟ್: ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ (Joe Biden)ಗೆ ಕೋವಿಡ್‌-19 ಪಾಸಿಟಿವ್‌ ಇರುವುದು ಮಂಗಳವಾರ(ಜು. 17) ದೃಢಪಟ್ಟಿದೆ. ಶೀತ, ಕೆಮ್ಮು, ಅಸ್ವಸ್ಥತೆಯಿಂದ ಬೈಡೆನ್‌ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಕೋವಿಡ್ ಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಬೈಡೆನ್‌, ನಾನು ಚೆನ್ನಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಕೋವಿಡ್ ಕಾರಣ ಬೈಡೆನ್ ಭಾಷಣ ರದ್ದುಗೊಳಿಸಿದ ನಂತರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ಯುಎಸ್ ಅಧ್ಯಕ್ಷರಿಗೆ ಕೋವಿಡ್‌ ಇರುವುದನ್ನು ಘೋಷಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ದಿನ ಸಮೀಪಿಸುತ್ತಿದೆ. ಈ ಹೊತ್ತಿನಲ್ಲಿ ಪ್ರಚಾರದಲ್ಲಿದ್ದ ಬೈಡನ್ ಗೆ ಕೋವಿಡ್‌ ದೃಢಪಟ್ಟಿದೆ. Click 👇