ನ್ಯೂಸ್ ನಾಟೌಟ್: ದಾಖಲಾತಿಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆ, ತಿದ್ದುಪಡಿ, ಹೆಸರು ಸೇರ್ಪಡೆ ಹೀಗೆ ಹಲವು ಸರ್ಕಾರಿ ಕೆಲಸಗಳು ಆನ್ಲೈನ್ನಲ್ಲಿ ನಡೆಯುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಹಲವರು ಮೋಸದ ಜಾಲಕ್ಕೆ ಸಿಲುಕಿಸಿ ಹಣ ದೋಚುತ್ತಾರೆ. ಇಂತಹ ಮೋಸದ ಜಾಲಕ್ಕೆ ಸಿಕ್ಕಿ ಚಂಡೀಗಢ ಮೂಲದ ಮಹಿಳೆ ಬರೋಬ್ಬರಿ 80 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಮುಂಬೈನ ಸೈಬರ್ ಕ್ರೈಂ ಅಧಿಕಾರಿಗಳ ರೀತಿಯಲ್ಲಿ ಮಹಿಳೆಗೆ ಅಪರಿಚಿತರು ಫೋನ್ ಮಾಡಿದ್ದಾರೆ. ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ನಿಂದ ಅಕ್ರಮ ಹಣ ವರ್ಗಾವಣೆ ನಡೆದಿವೆ ಎಂದು ಹೆದರಿಸಿದ್ದಾರೆ. ಈವರೆಗೂ 24 ಬಾರಿ ಕಪ್ಪು ಹಣದ ವರ್ಗಾವಣೆಯಾಗಿದ್ದು, ಶೀಘ್ರದಲ್ಲಿಯೇ ನಿಮ್ಮ ಬಂಧನವಾಗಲಿದೆ ಎಂದು ಪೊಲೀಸರಂತೆಯೇ ಮಾತನಾಡಿ ಬೆದರಿಸಿದ್ದಾರೆ ಎನ್ನಲಾಗಿದೆ. ನಿಮ್ಮ ಪೂರ್ಣ ಹೆಸರು ಹಾಗೂ ದಾಖಲಾತಿಗಳ ವಿವರಗಳು ಬೇಕಾಗಿದ್ದರಿಂದ ಕರೆ ಮಾಡಲಾಗಿದೆ. ಮಾಹಿತಿ ನೀಡಿದ್ರೆ ಯಾವುದೇ ರೀತಿಯಲ್ಲಿ ಬಂಧನ ಆಗಲ್ಲ ಎಂದು ಭರವಸೆ ನೀಡಿದ್ದಾರೆ.
ನಂತರ ಸೈಬರ್ ಕಳ್ಳರು ಕೇಳಿದ ಮಾಹಿತಿಯನ್ನು ಮಹಿಳೆ ಹೇಳುತ್ತಾ ಹೋಗಿದ್ದಾರೆ. ಆ ಬಳಿಕ ವಿಚಾರಣೆ ಭಾಗವಾಗಿ ನಾವು ಹೇಳುವ ಬ್ಯಾಂಕ್ ಖಾತೆಗೆ 80 ಲಕ್ಷ ರೂಪಾಯಿ ಜಮೆ ಮಾಡಬೇಕು. ವಿಚಾರಣೆ ಮುಗಿದ ನಂತರ ನಿಮ್ಮ ಹಣ ರೀಫಂಢ್ ಆಗಲಿದೆ ಎಂದಿದ್ದಾರೆ. ನಂತರ ಮಹಿಳೆ ವಂಚಕರ ಖಾತೆಗೆ ಹಣ ಜಮೆ ಮಾಡಿದ್ದಾರೆ ಎನ್ನಲಾಗಿದೆ, ಆ ಬಳಿಕ ವಂಚಕರು ಸಂಪರ್ಕಕ್ಕೆ ಸಿಕ್ಕಿಲ್ಲ. ಪ್ರಕರಣ ದಾಖಲಾಗಿದ್ದು ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click 👇