- +91 73497 60202
- [email protected]
- November 22, 2024 6:34 PM
ನ್ಯೂಸ್ ನಾಟೌಟ್: ಪಾಕಿಸ್ತಾನದ ಗಡಿಭಾಗದ ಸಾಂಚೋರ್ ಮತ್ತು ಇತರ ಜಿಲ್ಲೆಗಳಲ್ಲಿ ನಕಲಿ ಆಧಾರ್ ಕಾರ್ಡ್ ಗಳನ್ನು ಪಡೆಯುವ ಸಲುವಾಗಿ ಪ್ರಾಣಿಗಳ ಅಕ್ಷಿಪಟಲ ಮತ್ತು ಬಯೋಮೆಟ್ರಿಕ್ಸ್ ಗಾಗಿ ಕಾಲು ಬೆರಳಿನ ಗುರುತು ಮತ್ತು ಪುಟ್ಟ ಮಕ್ಕಳ ಬೆರಳಚ್ಚು ಬಳಸಲಾಗಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ರಾಜಸ್ಥಾನ ಸರ್ಕಾರ ಆಗ್ರಹಿಸಿದೆ. ರಾಜ್ಯ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೋಗರಾಂ ಪಟೇಲ್ ಈ ಬಗ್ಗೆ ಹೇಳಿಕೆ ನೀಡಿ, ನಕಲಿ ಆಧಾರ್ ಕಾರ್ಡ್ ಗಳನ್ನು ಪತ್ತೆ ಮಾಡುವ ಸಲುವಾಗಿ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ. ರಾಣಿವಾಡ ಕಾಂಗ್ರೆಸ್ ಶಾಸಕ ರತನ್ ದೇವಸಿ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ನಿಲುವಳಿ ಸೂಚನೆಯ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ. ನಕಲಿ ಆಧಾರ್ಕಾರ್ಡ್ ಗಳನ್ನು ಸೃಷ್ಟಿಸುವ ಸಲುವಾಗಿ ಪ್ರಾಣಿಗಳ ಅಕ್ಷಿಪಟಲಗಳನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ. ಜತೆಗೆ 200 ರೂಪಾಯಿಗೆ ಶಾಲಾಮಕ್ಕಳ ಬೆರಳಚ್ಚುಗಳನ್ನು ಕೂಡಾ ಸಂಗ್ರಹಿಸಲಾಗಿದೆ. ಅಕ್ಷಿಪಟಲ ಸ್ಕ್ಯಾನರ್ ಗಳನ್ನು ಬುಡಮೇಲು ಮಾಡಿ ಬಳಕೆ ಮಾಡಲಾಗಿದೆ ಎಂದಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ 14 ಇ-ಮಿತ್ರಾ/ಆಧಾರ್ ಆಪರೇಟರ್ ಗಳ ಯಂತ್ರಗಳನ್ನು ವಶಪಡಿಸಿಕೊಂಡು, ಅವರ ನೋಂದಣಿ ರದ್ದುಪಡಿ ಶೋಕಾಸ್ ನೋಟಿಸ್ ನೀಡಲಾಗಿದೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ