22 ಶತ್ರುಗಳ ಹೆಸರನ್ನು ಮೈಮೇಲೆ ಟ್ಯಾಟೂ ಹಾಕಿಸಿಕೊಂಡವನ ಭೀಕರ ಹತ್ಯೆ..! ಬಂಧಿತ ಐವರ ಹೆಸರೂ ಆತನ ಮೈಮೇಲಿತ್ತು..!

ನ್ಯೂಸ್ ನಾಟೌಟ್: ತನ್ನ ಶತ್ರುಗಳ ಹೆಸರನ್ನು ಮೈಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ(ಜು.24) ಮುಂಬೈನ ವರ್ಲಿ ಎಂಬ ಪ್ರದೇಶದಲ್ಲಿ ನಡೆದಿದೆ. (tattoo) ರೌಡಿ ಶೀಟರ್ ಹಾಗೂ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಗುರು ವಾಗ್ಮೋರೆ (48) ಎಂಬಾತ ಕೊಲೆಯಾದ ವ್ಯಕ್ತಿ. ಗುರು ವಿರುದ್ಧ ಮುಂಬೈನ ವಿವಿಧ ಠಾಣೆಗಳಲ್ಲಿ 22 ಪ್ರಕರಣ ದಾಖಲಾಗಿತ್ತು. ಈತ 22 ಮಂದಿಯ ಹೆಸರನ್ನು ಶತ್ರುಗಳು ಎಂಬಂತೆ ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ಎನ್ನಲಾಗಿದೆ. ಬುಧವಾರ ಬೆಳಿಗ್ಗೆ ವರ್ಲಿ ಪ್ರದೇಶದ ಸ್ಪಾ ಒಂದರಲ್ಲಿ ಗುರುವಿನ ಮೇಲೆ ದಿಢೀರ್ ದಾಳಿಯಾಗಿತ್ತು. ಮೈಮೇಲೆ ಟ್ಯಾಟೂವಿನಲ್ಲಿ ಹೆಸರಿದ್ದವರೇ ಆತನನ್ನು ಕೊಲೆ ಮಾಡಿದ್ದಾರೆ. ಬಂಧಿತ ಐವರ ಹೆಸರು ಟ್ಯಾಟೂ ರೂಪದಲ್ಲಿ ಗುರುವಿನ ಮೈಮೇಲೆ ಇತ್ತು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. Click