ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆ ಮುಗಿದ ಬಳಿಕ ಕರ್ನಾಟಕ ಸರ್ಕಾರದ ಆಡಳಿತ ವರ್ಗದಲ್ಲಿ ಬಹಳ ದೊಡ್ಡ ಬದಲಾವಣೆ ನಡೆಯುತ್ತಿದೆ, ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ, ಸರ್ಕಾರ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದೀಗ, ಕರ್ನಾಟಕ ಸರ್ಕಾರ (Karnataka Government) 21 ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರನ್ನು ಪ್ರವಾಸೋದ್ಯಮ ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.
ಅಧಿಕಾರಿಯ ಹೆಸರು | ಎಲ್ಲಿಂದ | ಎಲ್ಲಿಗೆ |
ಡಾ. ರಾಜೇಂದ್ರ ಕೆ.ವಿ | ಮೈಸೂರು ಜಿಲ್ಲಾಧಿಕಾರಿ | ಪ್ರವಾಸೋದ್ಯಮ ಇಲಾಖೆ ನಿರ್ದೇಶಕ |
ಡಾ. ರಾಮ್ ಪ್ರಸಾದ್ ಮನೋಹರ್ | ಪ್ರವಾಸೋದ್ಯಮ ಇಲಾಖೆ ನಿರ್ದೇಶಕ | ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ |
ನಿತೇಶ್ ಪಾಟೀಲ್ | ಬೆಳಗಾವಿ ಜಿಲ್ಲಾಧಿಕಾರಿ | ಎಂಎಸ್ಎಂಇ ನಿರ್ದೇಶಕ |
ಡಾ. ಅರುಂಧತಿ ಚಂದ್ರಶೇಖರ್ | ಖಜಾನೆ ಕಮಿಷನರ್ | ಪಂಚಾಯತ್ರಾಜ್ ಕಮಿಷನರ್ |
ಚಂದ್ರಶೇಖರ ನಾಯಕ ಎಲ್. | ರಾಯಚೂರು ಜಿಲ್ಲಾಧಿಕಾರಿ | ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ |
ವಿಜಯಮಹಾಂತೇಶ್ ಬಿ.ದಾನಮ್ಮನವರ್ | ಎಂಎಸ್ಎಂಇ ನಿರ್ದೇಶಕ | ಹಾವೇರಿ ಜಿಲ್ಲಾಧಿಕಾರಿ |
ಗೋವಿಂದ ರೆಡ್ಡಿ | ಬೀದರ್ ಜಿಲ್ಲಾಧಿಕಾರಿ | ಗದಗ ಜಿಲ್ಲಾಧಿಕಾರಿ |
ರಘುನಂದನ್ ಮೂರ್ತಿ | ಹಾವೇರಿ ಜಿಲ್ಲಾಧಿಕಾರಿ | ಖಜಾನೆ ಆಯುಕ್ತ ಬೆಂಗಳೂರು |
ಡಾ. ಗಂಗಾಧರಸ್ವಾಮಿ | ಕೃಷಿ ಮಾರ್ಕೆಟಿಂಗ್ ನಿರ್ದೇಶಕ | ದಾವಣಗೆರೆ ಜಿಲ್ಲಾಧಿಕಾರಿ |
ಲಕ್ಷ್ಮೀಕಾಂತ ರೆಡ್ಡಿ | ಕೆಯುಐಡಿಎಫ್ಸಿ ನಿರ್ವಹಣಾ ನಿರ್ದೇಶಕ | ಮೈಸೂರು ಜಿಲ್ಲಾಧಿಕಾರಿ |
ನಿತೀಶ್ ಕೆ. | ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ | ರಾಯಚೂರು ಜಿಲ್ಲಾಧಿಕಾರಿ |
ಮೊಹಮ್ಮದ್ ರೋಶನ್ | ಹೆಸ್ಕಾಂ ನಿರ್ವಹಣಾ ನಿರ್ದೇಶಕ | ಬೆಳಗಾವಿ ಜಿಲ್ಲಾಧಿಕಾರಿ |
ಶಿಲ್ಪಾ ಶರ್ಮಾ | ಕರ್ನಾಟಕ ವಿದ್ಯುತ್ ಕಾರ್ಖಾನೆ ಎಂಡಿ | ಬೀದರ್ ಜಿಲ್ಲಾಧಿಕಾರಿ |
ದಿಲೇಶ್ ಸಸಿ | ಎಡಿಸಿಎಸ್ ನಿರ್ದೇಶಕ | ಇ- ಆಡಳಿತ ಕೇಂದ್ರ ಸಿಇಒ ಬೆಂಗಳೂರು |
ಲೋಖಂಡೆ ಸ್ನೇಹಲ್ ಸುಧಾಕರ್ | ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಒ | ಕರ್ನಾಟಕ ವಿದ್ಯುತ್ ಕಾರ್ಖಾನೆ ಎಂಡಿ |
ಶ್ರೀರೂಪಾ | ಕೆಎಸ್ಎಸ್ಆರ್ಡಿ ನಿರ್ದೇಶಕಿ | ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಆಯುಕ್ತೆ |
ಜಿಟ್ಟೆ ಮಾಧವ ವಿಠಲ ರಾವ್ | ಕಲಬುರಗಿ ಸಿಟಿ ಕಾರ್ಪೊರೇಶನ್ ಡಿಸಿ | ಬಾಗಲಕೋಟೆ ಪುನರ್ವಸತಿ ಕೇಂದ್ರದ ಜನರಲ್ ಮ್ಯಾನೇಜರ್ |
ಹೇಮಂತ್ ಎನ್. | ಬಳ್ಳಾರಿ ಹಿರಿಯ ಸಹಾಯಕ ಆಯುಕ್ತ | ಶಿವಮೊಗ್ಗ ಜಿ.ಪಂ ಸಿಇಒ |
ನೊಂಗ್ಲಜ್ ಮೊಹಮದ್ ಅಲಿ ಅಕ್ರಂ ಶಾ | ಹಿರಿಯ ಸಹಾಯಕ ಆಯುಕ್ತ | ಹೊಸಪೇಟೆ ವಿಜಯನಗರ ಜಿ.ಪಂ ಸಿಇಒ |
ಜ್ಯೋತಿ ಕೆ. | – | ಜವಳಿ ಅಭಿವೃದ್ಧಿ ಆಯುಕ್ತ ಕೈಮಗ್ಗ ನಿರ್ದೇಶಕ |
ಶ್ರೀಧರ ಸಿ.ಎನ್ | – | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸೋಶಿಯಲ್ ಆಡಿಟ್ ನಿರ್ದೇಶಕ |