ನ್ಯೂಸ್ ನಾಟೌಟ್ : 14 ಗಂಟೆ ಕೆಲಸದ ಅವಧಿ ವಿಸ್ತರಿಸುವ ಪ್ರಸ್ತಾವಕ್ಕೆ ಸಿಡಿದೆದ್ದಿರುವ ಸಾಫ್ಟ್ವೇರ್ ಉದ್ಯೋಗಿಗಳು ನಿನ್ನೆ(ಜು.24) ತಡರಾತ್ರಿ ಮಡಿವಾಳ, ಬಿಟಿಎಂ ಲೇಔಟ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರದ ನಿರ್ಧಾರ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ಈಗಾಗಲೇ ಕ್ಯಾಂಪೇನ್ ಆರಂಭವಾಗಿದ್ದು, ಸರ್ಕಾರ ನಿರ್ಧಾರ ವಾಪಾಸ್ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. IT ನೌಕರರಿಗೆ 14 ಗಂಟೆಗಳ ಕೆಲಸದ ಅವಧಿ ವಿಸ್ತರಣೆ ವಿಚಾರವಾಗಿ ಸರ್ಕಾರ ವಿರುದ್ಧ ಆಕ್ರೋಶಗೊಂಡಿರುವ ಟೆಕ್ಕಿಗಳು, ಸಾಮೂಹಿಕವಾಗಿ ಇ-ಮೇಲ್ ಮಾಡಿ ಹೆಚ್ಚುವರಿ ಅವಧಿಗೆ ವಿರೋಧ ವ್ಯಕ್ತಪಡಿಸಲು ದೊಡ್ಡ ಅಭಿಯಾನವನ್ನು ನಡೆಸಲು ನಿರ್ಧರಿಸಿದ್ದಾರೆ.
ಐಟಿ-ಬಿಟಿ ಉದ್ಯೋಗಿಗಳಿಗೆ 14 ಗಂಟೆ ಕೆಲಸದ ಸಮಯ ನಿಗಧಿ ವಿಚಾರವಾಗಿ ಸರ್ಕಾರದ ಮೇಲೆ ಕೆಲ ಉದ್ಯಮಿಗಳಿಂದ ತೀವ್ರ ಒತ್ತಡ ಹೇರಲಾಗುತ್ತಿದೆ. ಕಾರ್ಮಿಕ ಸಚಿವರ ವಿರೋಧದ ನಡುವೆಯೂ ಮುಖ್ಯಕಾರ್ಯದರ್ಶಿ ಮೂಲಕ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ಯಮಿಗಳ ಕಸರತ್ತು ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯಗೂ ಉದ್ಯಮಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
Click