ನ್ಯೂಸ್ ನಾಟೌಟ್ : ಯೋಗ ದಿನಾಚರಣೆಯ ಅಂಗವಾಗಿ ಜೂ.21ರಂದು ಪುತ್ತೂರಿನ ನರಿಮೊಗರು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್ ನಲ್ಲಿ “ಯೋಗ ಉತ್ಸವ ” ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ವಿಜಯಾ ಬ್ಯಾಂಕ್ ನಿವೃತ್ತ ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ರೋಟರಿಯನ್ ಎ. ಜಗಜೀವನ್ ದಾಸ್ ರೈ ಉದ್ಘಾಟಿಸಲಿದ್ದಾರೆ. ಅಂತಾರಾಷ್ಟ್ರೀಯ ಯೋಗಪಟು ತೃಪ್ತಿ ಎನ್ . ಇವರಿಂದ ಯೋಗಾಸನ ಪ್ರದರ್ಶನ ಪ್ರಾತ್ಯಕ್ಷಿಕೆ ನಡೆಯಲಿದೆ. ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಆಯುರ್ವೇದ ತಜ್ಞ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಂದ “ಮನಸ್ಸು ಮತ್ತು ಯೋಗ ಮಾರ್ಗ ಲಾಭೋಪಾಯ” ಎಂಬ ವಿಷಯದ ಕುರಿತು ಸತ್ಸಂಗ ನಡೆಯಲಿದೆ. ಕು . ಸುಧೀಕ್ಷಾ ಹಾಗೂ ಕು . ಸುನಿಧಿ ಧನ್ವಂತರಿ ಸುಳಾದಿ, ಭಜನೆ ನಡೆಸಿಕೊಡಲಿದ್ದಾರೆ ಎಂದು ಆಸ್ಪತ್ರೆಯ ವ್ಯವಸ್ಥಾಪನಾ ನಿರ್ದೇಶಕಿ ಡಾ. ಶ್ರುತಿ ಎಂ. ಎಸ್. ತಿಳಿಸಿದ್ದಾರೆ . ಹೆಚ್ಚಿನ ಮಾಹಿತಿಗೆ 9740545979 ಸಂಪರ್ಕಿಸಬಹುದು.