ನ್ಯೂಸ್ ನಾಟೌಟ್: ಯೋಗದಿಂದ ಮನಸ್ಸಿನ ಏಕಾಗ್ರತೆ ಮತ್ತು ಆರೋಗ್ಯವನ್ನು ಸುಸ್ಥಿಯಲ್ಲಿಡಲು ಸಾಧ್ಯ ಎಂದು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸ್ವಸ್ಥ ವ್ರತ ವಿಭಾಗದ ಅಸೋಸಿಯೇಟ್ ಪ್ರೊಪೆಸರ್ ಡಾ. ಶಬೀನಾ ಟಿ. ಅಭಿಪ್ರಾಯಪಟ್ಟರು.
ಸುಳ್ಯದ ನೆಹರು ಮೆಮೋರಿಯಲ್ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ (ಜೂ. 21) ಆಯೋಜಿಸಿದ ಯೋಗ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ಬಳಿಕ ಮನಸ್ಸಿನ ಏಕಾಗ್ರತೆ, ಆರೋಗ್ಯವಂತರಾಗಿರಲು ಅನುಸರಿಸಬೇಕಾದ ಧ್ಯಾನ, ಮುದ್ರಗಳನ್ನು ತಿಳಿಸಿಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯೆ ಮಿಥಾಲಿ ಪಿ. ರೈ ಮಾತನಾಡಿ, ಪ್ರಾಚೀನ ಹಿನ್ನೆಲೆಯಿರುವ ಯೋಗವನ್ನು ದೈನಂದಿನ ಅಭ್ಯಾಸ ಕ್ರಮವಾಗಿ ರೂಢಿಸಿಕೊಳ್ಳಬೇಕು. ಆರೋಗ್ಯವಂತ ಜೀವನಕ್ಕೆ ಯೋಗ ಸಹಕಾರಿ ಎಂದರು.
ಕೆವಿಜಿ ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳಾದ ರಾಜಲಕ್ಷ್ಮಿ, ಚಿತ್ರಶ್ರೀ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಮಂತ್ ಸ್ವಾಗತಿಸಿ, ಕೃತಸ್ವರ ದೀಪ್ತ ಕೆ. ಅತಿಥಿಗಳನ್ನು ಪರಿಚಯಿಸಿದರು. ಗಾಯತ್ರಿ ನಿರೂಪಿಸಿ, ರಿಯಾ ಕೆ.ಜೆ. ವಂದಿಸಿದರು. ಕಾಲೇಜಿನ ಬೋಧಕ ಬೋಧಕೇತರ ವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.