ನ್ಯೂಸ್ ನಾಟೌಟ್: ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಕಾರ್ಯಕರ್ತರ ವರ್ಗ ಮತ್ತು ನೂತನ ಪದಾಧಿಕಾರಿಗಳ ಘೋಷಣೆ ಕಾರ್ಯಕ್ರಮ ಚೆನ್ನಕೇಶವ ದೇವಸ್ಥಾನದಲ್ಲಿ ಜೂನ್.23 ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷರಾದ ಡಾ. ಕೃಷ್ಣ ಪ್ರಸನ್ನ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಹಿಂದೂ ಸಂಘಟನೆ ಜವಾಬ್ದಾರಿಯನ್ನು ವಿವರಿಸಿದರು ಮತ್ತು ಕಾರ್ಯಕರ್ತರ ವರ್ಗ ಮತ್ತು ನೂತನ ಪದಾಧಿಕಾರಿಗಳನ್ನು ಘೋಷಿಸಿದರು. ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಗೋರಕ್ಷಾ ಪ್ರಮುಖರಾದ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಸಂಘಟನೆಯ ಮಹತ್ವವನ್ನು ವಿವರಿಸಿದರು.
ಮಾತೃ ಶಕ್ತಿ ಪ್ರಮುಖರಾಗಿ ರೀನಾ ಚಂದ್ರಶೇಖರ ಚೋಡಿಪಣೆ, ದುರ್ಗಾವಾಹಿನಿ ಸಂಯೋಜಕಿಯಾಗಿ ವಿಮಲಾ ಸೀತಾರಾಮ್ ಕರ್ಲಪ್ಪಾಡಿ, ಸಹ ಸಂಯೋಜಕಿಯಾಗಿ ಪಾರ್ವತಿ ವಿಶ್ವನಾಥ್, ಬಜರಂಗದಳದ ಸುರಕ್ಷಾ ಪ್ರಮುಖರಾಗಿ ದಿವಾಕರ್ ಬಾಳಿಲ, ಬಲೂಪಾಸನ ಪ್ರಮುಖರಾಗಿ ಪ್ರಬಂಧ ರೈ, ಸಹ ಗೋರಕ್ಷಾ ಪ್ರಮುಖರಾಗಿ ಮಂಜುನಾಥ್ ಕಾಟೂರುರನ್ನು ನೂತನ ಜವಾಬ್ದಾರಿಗಳಿಗಾಗಿ ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ್ ಪೈಕ, ಕಾರ್ಯದರ್ಶಿ ನವೀನ್ ಎಲಿಮಲೆ, ಸಂಚಾಲಕ ಹರಿಪ್ರಸಾದ್ ಎಲಿಮಲೆ ಉಪಸ್ಥಿತರಿದ್ದರು. ಪ್ರಖಂಡ ಪ್ರಮುಖರಾದ ಸನತ್ ಚೊಕ್ಕಾಡಿ, ಭಾನುಪ್ರಕಾಶ್ ಪೆರುಮುಂಡ, ಸತೀಶ್,ಬಾನುಪ್ರಕಾಶ್ ಪೆಲ್ತಡ್ಕ, ಸಂದೀಪ್ ವಳಲಂಬೆ ಹಾಗೂ ಹಲವಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Click 👇