ನ್ಯೂಸ್ ನಾಟೌಟ್: ವಿದೇಶಿಗರು ಭಾರತಕ್ಕೆ ಭೇಟಿ ನೀಡಿದಾಗ ಹಲವರಿಗೆ ಕಹಿ ಅನುಭವಗಳು ಆಗಿ ದೇಶದ ಬಗ್ಗೆ ಬಿನ್ನ ಅಭಿಪ್ರಾಯಗಳು ಬಂದಿರುವ ಹಲವು ಘಟನೆಗಳು ಈ ಹಿಂದೆ ನಡೆದಿದೆ, ಅದರಂತೆಯೇ ರಾಜಸ್ಥಾನದ ಜೈಪುರದಲ್ಲಿ ಯು.ಎಸ್ ಮಹಿಳೆಗೆ ಚಿನ್ನದ ಆಭರಣ ಎಂದು ನಂಬಿಸಿ 300 ರೂ. ನಕಲಿ ಒಡವೆಯನ್ನು 6 ಕೋಟಿ ರೂಪಾಯಿಗೆ ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಅಮೆರಿಕದ ಮಹಿಳೆಯೊಬ್ಬರು ₹ 300 ಮೌಲ್ಯದ ಕೃತಕ ಆಭರಣಗಳನ್ನು ₹ 6 ಕೋಟಿಗೆ ಖರೀಸಿ ವಂಚನೆಗೆ ಒಳಗಾಗಿದ್ದಾರೆ. ರಾಜಸ್ಥಾನದ ಜೈಪುರದ ಜೊಹ್ರಿ ಬಜಾರ್ನಲ್ಲಿರುವ ಅಂಗಡಿಯೊಂದರಲ್ಲಿ ಅಮೆರಿಕದ ಪ್ರಜೆಯಾದ ಚೆರಿಶ್ ಚಿನ್ನದ ಪಾಲಿಶ್ ಇರುವ ಬೆಳ್ಳಿ ಆಭರಣಗಳನ್ನು ಖರೀದಿಸಿ ಮೋಸ ಹೋಗಿದ್ದಾರೆ. ಈ ವರ್ಷ ಏಪ್ರಿಲ್ನಲ್ಲಿ ಯುಎಸ್ನಲ್ಲಿ ನಡೆದ ಪ್ರದರ್ಶನದಲ್ಲಿ ಆಭರಣಗಳನ್ನು ಪ್ರದರ್ಶಿಸಿದಾಗ, ಅದು ನಕಲಿ ಎಂದು ತಿಳಿದುಬಂದಿದೆ. ಚೆರಿಶ್ ಭಾರತಕ್ಕೆ ಬಂದು ಅಂಗಡಿ ಮಾಲೀಕ ಗೌರವ್ ಸೋನಿಯನ್ನು ಪ್ರಶ್ನಿಸಿದ್ದಾಳೆ.
ಅಂಗಡಿ ಮಾಲೀಕ ಆರೋಪಗಳನ್ನು ತಳ್ಳಿಹಾಕಿದ ನಂತರ, ಯುಎಸ್ ಮಹಿಳೆ ಜೈಪುರದಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ ಮಾತ್ರವಲ್ಲದೆ ಯುಎಸ್ ರಾಯಭಾರ ಕಚೇರಿಯಿಂದ ಸಹಾಯವನ್ನು ಕೋರಿದರು. ಅವರು ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಜೈಪುರ ಪೊಲೀಸರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕೃತಕ ಆಭರಣಗಳಿಗಾಗಿ ಆಕೆ ₹ 6 ಕೋಟಿ ಪಾವತಿಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೌರವ್ ಮತ್ತು ಆತನ ತಂದೆ ರಾಜೇಂದ್ರ ಸೋನಿ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Click 👇