ನ್ಯೂಸ್ ನಾಟೌಟ್ : ದೇವಾಲಯದ ಬಾಗಿಲು ಮುರಿದು ದೇವಿಗೆ ಹಾಕಲಾಗುತ್ತಿದ್ದ ಸುಮಾರು 40 ಗ್ರಾಂ ನಷ್ಟು ಚಿನ್ನದ ಆಭರಣ, ಒಂದು ಕೆಜಿ ಬೆಳ್ಳಿ, ಹುಂಡಿಯಲ್ಲಿದ್ದ ಸುಮಾರು 50, 000 ರೂಪಾಯಿ ಹಣ ಕಳ್ಳತನ ಮಾಡಿದ ಘಟನೆ ತುಮಕೂರಿನ ಮುದ್ದನಹಳ್ಳಿಯ ಹೊಸೂರಿನ ದೊಡ್ಡಮ್ಮದೇವಿ ದೇವಾಲಯದಲ್ಲಿ ಗುರುವಾರ ರಾತ್ರಿ(ಜೂ.6) ನಡೆದಿದೆ.
ದೇವಾಲಯದೊಳಗಿದ್ದ ಬೀರು ಒಡೆದು ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ ಎನ್ನಲಾಗಿದ್ದು, ಕಳ್ಳರು ಒಂದೇ ದಿನ ಇನ್ನೂ ಮೂರು ದೇವಾಲಯ ಕಳ್ಳತನ ಮಾಡಿದ್ದಾರೆಂದು ತನಿಖೆಯ ವೇಳೆ ಬಯಲಾಗಿದೆ. ದೇವಾಲಯದ ಅಧ್ಯಕ್ಷ ನಿರಂಜನ್ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇತ್ತೀಚೆಗೆ ಗ್ರಾಮಗಳಲ್ಲಿ ಕುರಿ, ಮೇಕೆ, ಕೊಬ್ಬರಿ, ಅಡಿಕೆ ಕಳವು ಮಾಡುತ್ತಿರುವುದು ಬೆಳಕಿಗೆ ಬರುತ್ತಿತ್ತು. ಕೂಡಲೇ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Click 👇