3 ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆ..! ಇಲ್ಲಿದೆ ಗ್ರಾಮಸ್ಥರ ಸಾಹಸದ ರೋಚಕ ಕಥೆ..!

ನ್ಯೂಸ್ ನಾಟೌಟ್: ಮೂರು ದಿನಗಳ ಹಿಂದೆ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ ಎಂದು ಇಂಡೋನೇಷ್ಯದಲ್ಲಿ ದೂರು ನೀಡಲಾಗಿತ್ತು. ಇದಾದ 3 ದಿನಗಳ ಬಳಿಕ ಆ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. 16 ಅಡಿಯ ಹೆಬ್ಬಾವು ಆಕೆಯನ್ನು ಪೂರ್ತಿಯಾಗಿ ನುಂಗಿತ್ತು ಎನ್ನಲಾಗಿದೆ. 45 ವರ್ಷದ ಫರೀದಾ ಪತಿ ಮತ್ತು ದಕ್ಷಿಣ ಸುಲವೆಸಿ ಪ್ರಾಂತ್ಯದ ಕಲೆಂಪಂಗ್ ಗ್ರಾಮದ ನಿವಾಸಿಗಳು ಶುಕ್ರವಾರ(ಜೂ.7) ಐದು ಮೀಟರ್ (16 ಅಡಿ) ಅಳತೆಯ ಹೆಬ್ಬಾವಿನೊಳಗೆ ಮಹಿಳೆ ಇರುವುದನ್ನು ಪತ್ತೆ ಮಾಡಿದ್ದಾರೆ. ನಾಲ್ಕು ಮಕ್ಕಳ ತಾಯಿ ಗುರುವಾರ ರಾತ್ರಿ ನಾಪತ್ತೆಯಾಗಿದ್ದರು, ಈ ಕುರಿತು ಮನೆ ಹತ್ತಿರದ ಕಾಡಿನೊಳಗೆ ಹುಡುಕಾಟ ನಡೆಸಲಾಗಿತ್ತು ಎನ್ನಲಾಗಿದೆ. ಸ್ಥಳದಲ್ಲಿ ಆಕೆಗೆ ಸಂಬಂಧಿಸಿದ ವಸ್ತುಗಳು ಕಂಡುಬಂದಾಗ ಪತಿಗೆ ಅನುಮಾನ ಉಂಟಾಗಿತ್ತು. ನಂತರ ಗ್ರಾಮಸ್ಥರು ಆ ಪ್ರದೇಶದಲ್ಲೆಲ್ಲಾ ಹುಡುಕಾಡಿದ್ದಾರೆ. ಆಗ ಅವರಿಗೆ ದೊಡ್ಡ ಹೊಟ್ಟೆಯ ಹೆಬ್ಬಾವು ಕಾಣ ಸಿಕ್ಕಿತು ಎನ್ನಲಾಗಿದೆ. ಬಳಿಕ ಸ್ಥಳೀಯರು, ಊರಿನವರು ಸೇರಿ ಹೆಬ್ಬಾವಿನ ಹೊಟ್ಟೆಯನ್ನು ಸಿಗಿದಿದ್ದಾರೆ, ಈ ವೇಳೆ ಫರೀದಾ ಅವರ ತಲೆ ಗೋಚರಿಸಿತು ಎಂದು ವರದಿ ತಿಳಿಸಿದೆ. ಈ ಅನುಮಾನ ಮೂಡಲು ಕಾರಣ ಇತ್ತೀಚಿನ ವರ್ಷಗಳಲ್ಲಿ ಇಂಡೋನೇಷ್ಯಾದಲ್ಲಿ ಹೆಬ್ಬಾವುಗಳು ಮನುಷ್ಯರನ್ನು ನುಂಗಿದ ಘಟನೆಯಲ್ಲಿ ಹಲವಾರು ಜನರು ಸಾವನ್ನಪ್ಪಿದ್ದರು. Click 👇