ಹೆಂಡ್ತಿ, ಮಕ್ಕಳನ್ನು ಕಾರಿನ ಸಮೇತ ಬೆಟ್ಟದಿಂದ ಪ್ರಪಾತಕ್ಕೆ ತಳ್ಳಿದ ಭಾರತೀಯ ಮೂಲದ ವೈದ್ಯ..! ಅಮೆರಿಕ ನ್ಯಾಯಾಲಯ ಶಿಕ್ಷೆ ನೀಡಲಿಲ್ಲವೇಕೆ..?

ನ್ಯೂಸ್ ನಾಟೌಟ್: ಭಾರತೀಯ ಮೂಲದ ವೈದ್ಯರೊಬ್ಬರು ಎಸಗಿದ ಭೀಕರ ಕೃತ್ಯಕ್ಕೆ ಅಮೆರಿಕದಲ್ಲಿ ವಿಚಿತ್ರ ಶಿಕ್ಷೆ ದೊರಕಿದೆ. ತಮ್ಮ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಕಾರಿನಲ್ಲಿ ಕೂರಿಸಿಕೊಂಡು ಬೆಟ್ಟವನ್ನೇರಿದ್ದ ಈತ, ಬೆಟ್ಟದ ಶಿಖರ ತಲುಪಿ ಕಾರನ್ನು ಪ್ರಪಾತದಿಂದ ಕೆಳಗೆ ಬೀಳಿಸಿದ್ದ! ಟೆಸ್ಲಾ ಕಾರು ಸುಮಾರು 250 ಅಡಿ ಆಳಕ್ಕೆ ಬಿದ್ದರೂ ಕಾರಿನಲ್ಲಿದ್ದ ವೈದ್ಯರ ಹೆಂಡತಿ ಹಾಗೂ ಮಕ್ಕಳು ಪವಾಡ ಸದೃಶವಾಗಿ ಬದುಕುಳಿದಿದ್ದರು. ಇದೀಗ ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿರುವ ನ್ಯಾಯಾಲಯ ವೈದ್ಯರನ್ನು ಖುಲಾಸೆಗೊಳಿಸಿದೆ ಎನ್ನಲಾಗಿದೆ. ಧರ್ಮೇಶ್ ಪಟೇಲ್ ಎಂಬ ಈ ವೈದ್ಯರು, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ರೇಡಿಯಾಲಜಿಸ್ಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಹಲವು ರೀತಿಯ ಮಾನಸಿಕ ಸಮಸ್ಯೆಗಳು ಇದ್ದವು. ಗಂಭೀರ ಸ್ವರೂಪದ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಪಟೇಲ್, ತಮ್ಮ ಪತ್ನಿ ನೇಹಾ ಹಾಗೂ 7 ಮತ್ತು 4 ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ಕಾರಿನಲ್ಲಿ ಬೆಟ್ಟದ ತುದಿಗೆ ಕರೆದೊಯ್ದು ಅವರನ್ನು ಪ್ರಪಾತಕ್ಕೆ ತಳ್ಳಿದ್ದರು. ಇದಕ್ಕೆ ಕಾರಣವೇನು ಎಂದು ಕೇಳಿದರೆ, ನನ್ನ ಮಕ್ಕಳು ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕುವ ಆತಂಕ ಇತ್ತು ಎಂದಿದ್ದಾರೆ ಎನ್ನಲಾಗಿದೆ. ವೈದ್ಯರ ಮಕ್ಕಳಿಗೂ ವೇಶ್ಯಾವಾಟಿಕೆ ಜಾಲಕ್ಕೂ ಯಾವುದೇ ಸಂಬಂಧ ಇಲ್ಲ! ಇವೆಲ್ಲವೂ ವೈದ್ಯ ಧರ್ಮೇಶ್ ಪಟೇಲ್ ಅವರ ಭ್ರಮೆ.. ಗಂಭೀರ ಮನೋ ರೋಗವಾದ ಸ್ಕಿಜೋಫ್ರೇನಿಯಾಗೆ ಒಳಗಾಗಿರುವ ಧರ್ಮೇಶ್ ಪಟೇಲ್, ಆಗಾಗ ಮಾನಸಿಕ ಕುಸಿತಕ್ಕೆ ಒಳಗಾಗುತ್ತಾರೆ. ಇಂಥಾ ಸಂದರ್ಭದಲ್ಲಿ ಭ್ರಮಾಲೋಕದಲ್ಲಿ ಮುಳುಗಿ ಹೋಗುವ ರೋಗಿಗಳು ಈ ರೀತಿಯ ಕೃತ್ಯ ಎಸಗುತ್ತಾರೆ ಎಂದು ಮನೋ ವೈದ್ಯರು ನ್ಯಾಯಾಲಯಕ್ಕೆ ವಿವರಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ದುರಂತದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಧರ್ಮೇಶ್ ಪತ್ನಿ ನೇಹಾ ಅವರು ತಮ್ಮ ಪತಿಗೆ ಯಾವುದೇ ಶಿಕ್ಷೆ ನೀಡದಂತೆ ಮನವಿ ಮಾಡಿದ್ದರು. ಈ ಅಂಶವನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. ಮನೋ ವೈದ್ಯರ ಪ್ರಕಾರ ಡಾ. ಧರ್ಮೇಶ್ ಪಟೇಲ್ ಅವರು ಸ್ಕಿಜೋಎಫೆಕ್ಟೀವ್ ಡಿಸಾರ್ಡರ್‌ನಿಂದಲೂ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. Click 👇