ನ್ಯೂಸ್ ನಾಟೌಟ್: ಜೆಡಿಎಸ್ ಕಾರ್ಯಕರ್ತನೋರ್ವ ಸೂರಜ್ ರೇವಣ್ಣ (Suraj Revanna) ವಿರುದ್ಧ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುತ್ತಿದ್ದಂತೆಯೇ ಇತ್ತ ಹೊಳೆನರಸೀಪುರದಲ್ಲಿ ಸಂತ್ರಸ್ತನ ವಿರುದ್ಧವೇ ದೂರು ದಾಖಲಾಗಿದೆ.
ಸೂರಜ್ ರೇವಣ್ಣನ ಆಪ್ತ ಶಿವಕುಮಾರ್ ಎನ್ನುವಾತ ಸಂತ್ರಸ್ತನ ವಿರುದ್ಧ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಬ್ಲ್ಯಾಕ್ ಮೇಲ್ ದೂರು ನೀಡಿದ್ದಾನೆ. ಆದ್ರೆ, ಇದೀಗ ಸಂತ್ರಸ್ತನ ದೂರಿನ ಅನ್ವಯ ಸೂರಜ್ನನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಂತೆಯೇ ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಶಿವಕುಮಾರ್ ನಾಪತ್ತೆಯಾಗಿದ್ದಾನೆ.
ಸೂರಜ್ ರೇವಣ್ಣ ಪರವಾಗಿ ದೂರು ನೀಡಿದ ನಂತರ ಶಿವಕುಮಾರ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಶಿವಕುಮಾರ್ ನಾಪತ್ತೆಯಾಗಿದ್ದಾನೆ. ಸಂತ್ರಸ್ತನ ವಿರುದ್ಧ ಶಿವಕುಮಾರ್ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಹೋಗಿಯೇ ಸೂರಜ್ ರೇವಣ್ಣ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಶಿವಕುಮಾರ್, ಸೂರಜ್ ರೇವಣ್ಣ ಜೊತೆಗಿದ್ದೇ ಪಿತೂರಿ ನಡೆಸಿದ್ನಾ? ಎನ್ನುವ ಅನುಮಾನಗಳು ಎಡೆಮಾಡಿಕೊಟ್ಟಿವೆ.
‘ಸೂರಜ್ ರೇವಣ್ಣ ವಿರುದ್ಧದ ದೂರುದಾರ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದ. ಐದು ಕೋಟಿ ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ’. ಈ ರೀತಿ ಸುಳ್ಳು ದೂರು ನೀಡಿ ಬೆದರಿಕೆ ಹಾಕಿರುವ ಬಗ್ಗೆ ಉಲ್ಲೇಖಿಸಿ ಸೂರಜ್ ರೇವಣ್ಣನ ಆಪ್ತ ಶಿವಕುಮಾರ್ ದೂರು ಸಲ್ಲಿಕೆ ಮಾಡಿದ್ದರಿಂದ ಸಂತ್ರಸ್ತನ ವಿರುದ್ಧವೂ ಐಪಿಸಿ ಸೆಕ್ಸೆನ್ 384, 506 ರ ಅಡಿಯಲ್ಲಿ 168/2024 ರಡಿ ಕೇಸ್ ದಾಖಲಾಗಿದೆ,. ಆದರೆ ಈಗ ದೂರು ನೀಡಿದವನೇ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾನೆ.
Click 👇