ನ್ಯೂಸ್ ನಾಟೌಟ್: ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗ ನವದೆಹಲಿ (ಎನ್.ಸಿ.ಐ.ಎಸ್.ಎಂ.) ಇದರ ಸಹಭಾಗಿತ್ವದಲ್ಲಿ ಮೇ 27ರಿಂದ 31ರ ತನಕ ಹೈದ್ರಬಾದ್ನಲ್ಲಿ “ಉದ್ಯಮಶೀಲತೆ ಅಭಿವೃದ್ಧಿಯಲ್ಲಿ ತರಬೇತುದಾರರ ತರಬೇತಿ” ಕಾರ್ಯಾಗಾರ ನಡೆಯಿತು.
ಈ ಕಾರ್ಯಾಗಾರದಲ್ಲಿ ಸುಳ್ಯ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶಲ್ಯ ತಂತ್ರ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಡಾ. ಹರ್ಷವರ್ಧನ್ ಕೆ. ಭಾಗವಹಿಸಿರುತ್ತಾರೆ.