ಅರಂಬೂರು: ಪಾದಾಚಾರಿಗೆ ಗುದ್ದಿದ ದ್ವಿಚಕ್ರ ವಾಹನ, ಗಾಯಾಳು ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಅರಂಬೂರು ಬಳಿ ದ್ವಿಚಕ್ರ ವಾಹನವೊಂದು ಪಾದಾಚಾರಿಗೆ ಗುದ್ದಿರುವ ಘಟನೆ ಇದೀಗ (ಜೂ.9) ನಡೆದಿದೆ. ಅರಂಬೂರು ಶಾಲೆ ಬಳಿ ಪಾದಾಚಾರಿಗೆ ಬೈಕ್ ಡಿಕ್ಕಿಯಾಗಿದೆ. ಪಾದಾಚಾರಿಗೆ ಗಾಯವಾಗಿದೆ. ಎಂದು ತಿಳಿದು ಬಂದಿದೆ. ಗಾಯಾಳುವನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬೈಕ್ ಸುಳ್ಯದಿಂದ ಅರಂತೋಡು ಕಡೆಗೆ ಚಲಿಸುತ್ತಿತ್ತು ಎಂದು ತಿಳಿದು ಬಂದಿದೆ.