ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಪಾಲಡ್ಕ ಬಳಿ ದೊಡ್ಡ ಕಣಿಗೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬಿದ್ದಿರುವ ಘಟನೆ ಇದೀಗ (ಜೂ.23) ರಾತ್ರಿ ನಡೆದಿದೆ.
ಇಕೋ ಟ್ಯಾಕ್ಸಿ ಕಾರು ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಮಳೆಯ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ. ಅತಿಯಾದ ವೇಗ ಅಪಾಯಕ್ಕೂ ದಾರಿಯಾಗಬಹುದು.