ವಿಜಯಪುರದ ಸ್ಟ್ರಾಂಗ್ ರೂಮ್​​ ಕೀ ಮನೆಯಲ್ಲೇ ಬಿಟ್ಟು ಬಂದ ಅಧಿಕಾರಿ..! ತಡವಾಗಿ ಎಣಿಕೆ ಆರಂಭ..!

ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆ 2024ರ ಫಲಿತಾಂಶದ ದಿನ ಹಲವು ಸ್ವಾರಸ್ಯಕರ ಘಟನೆಗಳು ನಡೆಯುತ್ತಿರುತ್ತವೆ. ಈಗಾಗಲೇ ಎಲ್ಲಾ ಕಡೆ ಬಹುತೇಕ ಸ್ಟ್ರಾಂಗ್ ರೂಮ್​ಗಳು ಓಪನ್ ಆಗಿದ್ದು ಅಂಚೆ ಮತ ಎಣಿಕೆ ಕೂಡ ಆರಂಭವಾಗಿದೆ. ಆದರೆ ವಿಜಯಪುರದಲ್ಲಿ ಅಧಿಕಾರಿ ಸ್ಟ್ರಾಂಗ್ ರೂಮ್​ನ ಬೀಗದ ಕೈ ಇದ್ದ ತಂಗಿದ್ದ ರೂಮ್ ನಲ್ಲೇ ಮರೆತು ಬಂದ ಪ್ರಸಂಗ ನಡೆದಿದೆ. ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಶರೀಫ್ ಸ್ಟ್ರಾಂಗ್ ರೂಮ್​ನ ಬೀಗದ ಕೈಯನ್ನು ಮನೆಯಲ್ಲೇ ಬಿಟ್ಟು ಬಂದಿದ್ದರು. ಲಾಕ್ ಓಪನ್ ಮಾಡಲು ಹೋದಾಗ ತಮ್ಮ ಬಳಿ ಕೀ ಇಲ್ಲದಿರುವುದು ತಿಳಿದುಬಂದಿದೆ. ತಕ್ಷಣವೇ ಶರೀಫ್ ತಮ್ಮ ಮನೆಗೆ ಹಿಂದಿರುಗಿದ್ದು ಕೀ ತಂದು ಈಗ ಸ್ಟ್ರಾಂಗ್ ರೂಮ್ ಓಪನ್ ಮಾಡಿದ್ದಾರೆ. ಅಧಿಕಾರಿಯ ಎಡವಟ್ಟಿನಿಂದಾಗಿ ಸ್ಟ್ರಾಂಗ್ ರೂಮ್ ಓಪನ್ ಮಾಡಲು ವಿಜಯಪುರದಲ್ಲಿ ನಡೆದಿದೆ. Click 👇